ನಾಳೆ ಕರ್ನಾಟಕ ಪ್ರವೇಶಿಸಲಿರುವ ಭಾರತ್ ಜೋಡೋ ಯಾತ್ರೆ

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಜೋಡೋ ನಾಳೆ ಶುಕ್ರವಾರ ಕರ್ನಾಟಕ ಪ್ರವೇಶಿಸಲಿದೆ. ರಾಜ್ಯದಲ್ಲಿ ಚಾಮರಾಜನಗರ ಜಿಲ್ಲೆಯ ಮೂಲಕ ಎಂದು 350 ಕಿಲೋಮೀಟರ್ ಭಾರತ್ ಜೋಡೋ ಯಾತ್ರೆ ಇರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬಿಜೆಪಿಯ ದ್ವೇಷ ರಾಜಕಾರಣವನ್ನು ಕೊನೆಗೊಳಿಸಲು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಮುನ್ನಡೆದಿದೆ ಎಂದು ವಿಧಾನ ಪರಿಷತ್ತಿನಲ್ಲಿ ಪ್ರತಿ ಪಕ್ಷದ ನಾಯಕ ಬಿ. ಕೆ. ಹರಿಪ್ರಸಾದ್ ತಿಳಿಸಿದ್ದಾರೆ.

- Advertisement -

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ರಾಜ್ಯ ಪ್ರವೇಶಿಸಲಿರುವ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯು ಮೈಸೂರು ಮಂಡ್ಯ ದಾರಿಯಾಗಿ ಮುನ್ನಡೆದು ಅಕ್ಟೋಬರ್ 16ರಂದು ಬಳ್ಳಾರಿ ತಲುಪುತ್ತದೆ. ಅಲ್ಲಿ ದೊಡ್ಡ ಸಭೆಯ ಬಳಿಕ ಸ್ವಲ್ಪ ರಾಯಚೂರು ಜಿಲ್ಲೆಯನ್ನು ಹಾದು ಯಾತ್ರೆಯು ಆಂಧ್ರ ಪ್ರದೇಶಕ್ಕೆ ನುಗ್ಗುತ್ತದೆ ಎಂದು ತಿಳಿಸಲಾಗಿದೆ.

“ಬಿಜೆಪಿ ಆಡಳಿತ ಎಂದರೆ ನಿರುದ್ಯೋಗ ಮತ್ತು ಭ್ರಷ್ಟಾಚಾರ. ಅದಕ್ಕೆ ಉತ್ತರ ಆಗಲಿದೆ ಭಾರತ್ ಜೋಡೋ ಯಾತ್ರೆ” ಎಂದೂ ಹರಿಪ್ರಸಾದ್ ಹೇಳಿದರು.

- Advertisement -