ಸಂಘಪರಿವಾರ ಕಾರ್ಯಕರ್ತರಿಂದಲೇ ಹತ್ಯೆಯಾದ ಪ್ರವೀಣ್ ಪೂಜಾರಿ ಫೋಟೊ ಹಾಕಿ ಕೋಮುಬಣ್ಣ ಬಳಿದ ಬಿಜೆಪಿ

Prasthutha|

ಬೆಂಗಳೂರು: ಸಂಘಪರಿವಾರದ ಕಾರ್ಯಕರ್ತರಿಂದಲೇ ಹತ್ಯೆಗೊಳಗಾದ ಪ್ರವೀಣ್ ಪೂಜಾರಿಯ ಫೋಟೊ ವನ್ನು ಬಿಜೆಪಿ ಪ್ರಕಟಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

- Advertisement -

PFI ಸಂಘಟನೆಯನ್ನು ನಿಷೇಧಿಸಿರುವ ವಿಚಾರಕ್ಕೆ ಸಂಬಂಧಿಸಿ ಟ್ವೀಟ್ ಮಾಡಿರುವ ಬಿಜೆಪಿ, ಕೋಮುದ್ವೇಷಕ್ಕೆ ಬಲಿಯಾದ ನಮ್ಮ ಕಾರ್ಯಕರ್ತರ ಆತ್ಮಕ್ಕೆ ಶಾಂತಿ ನೀಡುವುದು ಬಿಜೆಪಿಯ ಬದ್ಧತೆ. ಅವರ ಸಾವಿಗೆ ನ್ಯಾಯ ದೊರಕಿಸುವ ಹಾದಿಯಲ್ಲಿ ಪಿಎಫ್ಐ ನಿಷೇಧ ಮಾಡಲಾಗಿದೆ ಎಂದು ಬರೆದುಕೊಂಡಿದೆ.

ಗೋ ಸಾಗಾಟ ಮಾಡುತ್ತಿದ್ದ ಎಂದು ಆರೋಪಿಸಿ ಆರ್ ಎಸ್ ಎಸ್ ಕಾರ್ಯಕರ್ತ ಉಡುಪಿಯ ಕೆಂಜೂರು ನಿವಾಸಿ ಪ್ರವೀಣ್ ಪೂಜಾರಿಯನ್ನು 2016 ಉಡುಪಿಯಲ್ಲಿ ಸಂಘಪರಿವಾರದ ಕಾರ್ಯಕರ್ತರು ಹತ್ಯೆಗೈದಿದ್ದರು. ಪ್ರಕರಣಕ್ಕೆ ಸಂಬಂಧಿಸಿ 18 ಮಂದಿ  ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಇದೀಗ ತಮ್ಮಕಾರ್ಯಕರ್ತರಿಂದಲೇ ಹತ್ಯೆಯಾದ ಪ್ರವೀಣ್ ಪೂಜಾರಿ ಫೋಟೊ ಹಾಕಿ ಅದಕ್ಕೆ ಕೋಮುಬಣ್ಣ ಬಳಿದು ಬಿಜೆಪಿ ಜನರಿಗೆ ತಪ್ಪು ಮಾಹಿತಿ ಕೊಟ್ಟಿದೆ ಎಂದು ನೆಟ್ಟಿಗರು ಕುಟುಕಿದ್ದಾರೆ.

- Advertisement -

Join Whatsapp