SDPI ಹರೇಕಳ ವತಿಯಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ

Prasthutha|

►ಹರೇಕಳ ಗ್ರಾಮದ ಕಿಸಾನ್ ನಗರ, RG ನಗರ, ನ್ಯೂಪಡ್ಪುವಿನಲ್ಲಿ ದ್ವಜಾರೋಹಣ ಕಾರ್ಯಕ್ರಮ

- Advertisement -

ಹರೇಕಳ : ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಎಸ್ಡಿಪಿಐ ಹರೇಕಳ ಗ್ರಾಮ ಸಮಿತಿ ಅಧೀನದಲ್ಲಿ ಫ್ಯಾಶಿಸ್ಟರ  ಸಂಕೋಲೆಯಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸೋಣ ಘೋಷವಾಕ್ಯದೊಂದಿಗೆ ಸಂಭ್ರಮದ ಸ್ವಾತಂತ್ರ್ಯ ದಿವಸವನ್ನು ಆಚರಿಸಲಾಯಿತು.

ಫರೀದ್ ನಗರ ಬೂತ್ ಸಮಿತಿ ವತಿಯಿಂದ ಕಿಸಾನ್ ನಗರದಲ್ಲಿ ದ್ವಜಾರೋಹಣ

- Advertisement -

ಎಸ್ಡಿಪಿಐ ಹರೇಕಳ ಗ್ರಾಮ ಸಮಿತಿ ಅಧೀನದ ಫರೀದ್ ನಗರ ಬೂತ್ ಸಮಿತಿ ವತಿಯಿಂದ ಹರೇಕಳದ ಕಿಸಾನ್ ನಗರದಲ್ಲಿ ಸ್ವಾತಂತ್ರ್ಯೋತ್ಸವದ ದ್ವಜಾರೋಹಣವನ್ನು ಬೂತ್ ಸಮಿತಿ ಅಧ್ಯಕ್ಷ ಫಾರೂಕ್ ರವರು ನೆರೆವೇರಿಸಿದರು. ಕಾರ್ಯಕ್ರಮದಲ್ಲಿ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಮಜೀದ್, ಎಸ್ಡಿಪಿಐ ನಾಯಕರಾದ ಝೈನುದ್ದೀನ್ ಫರೀದ್ ನಗರ, ಸ್ವದಕ, ಆಸ್ಬಕ್ , ಸಾದಿಕ್, ಜಮಾಲ್ ಅಹ್ಮದ್ ಹಾಗು  ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಫರೀದ್ ನಗರ ಬೂತ್ ಸಮಿತಿ ಕಾರ್ಯದರ್ಶಿ ಹುಸೈನ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ಧನ್ಯವಾದಗೈದರು

ನ್ಯೂಪಡ್ಪು ಬೂತ್ ಮತ್ತು RG ನಗರ ಬೂತ್ ಸಮಿತಿ ವತಿಯಿಂದ ಐಕುವಿನಲ್ಲಿ ದ್ವಜಾರೋಹಣ

77 ನೇ  ಸ್ವಾತಂತ್ರ್ಯದ ಅಂಗವಾಗಿ ನ್ಯೂಪಡ್ಪು ಬೂತ್ ಸಮಿತಿ ಮತ್ತು RG ನಗರ ಬೂತ್ ಸಮಿತಿ ವತಿಯಿಂದ ಜಂಟಿಯಾಗಿ ಹರೇಕಳದ ಐಕು ಪ್ರದೇಶದ ಎಸ್ಡಿಪಿಐ ಬಸ್ ತಂಗುದಾಣದ ಮುಂಭಾಗ ದ್ವಜಾರೋಹಣ ಕಾರ್ಯಕ್ರಮ ನಡೆಯಿತು. RG ನಗರ ಬೂತ್ ಸಮಿತಿ ಅಧ್ಯಕ್ಷ ಶಾಜುದ್ದೀನ್ ದ್ವಜಾರೋಹಣಗೈದರು. ಕಾರ್ಯಕ್ರಮದಲ್ಲಿ ನ್ಯೂಪಡ್ಪು ಬೂತ್ ಸಮಿತಿ ಅಧ್ಯಕ್ಷ  ಅಸೀಫ್ ಆಚಿ, ಉಪಾಧ್ಯಕ್ಷ ಮುಹಮ್ಮದ್ ಆರೀಸ್, RG ನಗರ ಬೂತ್ ಸಮಿತಿ ಕಾರ್ಯದರ್ಶಿಗಳಾದ ಮನ್ಸೂರು, ಅಶ್ರಫ್, ಕಾರ್ಯಕರ್ತರಾದ ಮುಖ್ತಾರ್, ಆಫ್ರೀದ್ ಹಾಗು  ಎಸ್ಡಿಪಿಐ ಹರೇಕಳ ಗ್ರಾಮ ಸಮಿತಿ ಪಧಾದಿಕಾರಿಗಳು  ಉಪಸ್ಥಿತರಿದ್ದರು.

SDPI ಹರೇಕಳ ಗ್ರಾಮ ಸಮಿತಿ ವತಿಯಿಂದ ನ್ಯೂಪಡ್ಪು ಜಂಕ್ಷನ್ನಲ್ಲಿ ದ್ವಜಾರೋಹಣ

ಸ್ವತಂತ್ರ ರಾಷ್ಟ್ರವಾಗಿ ಉದಯಿಸಿದ ಭಾರತವು ಇಂದು 77ನೇ ಸ್ವಾತಂತ್ರ್ಯದ ಮಹೋತ್ಸವನ್ನು ಆಚರಿಸುವ ಶುಭ ದಿನದಂದು ಎಸ್ಡಿಪಿಐ ಹರೇಕಳ ಗ್ರಾಮ ಸಮಿತಿ ವತಿಯಿಂದ ಹರೇಕಳದ ಹೆಬ್ಬಾಗಿಲು ನ್ಯೂಪಡ್ಪುವಿನಲ್ಲಿ ಸಂಭ್ರಮದ ಸ್ವಾತಂತ್ರ್ಯದ ದಿನವನ್ನು ಆಚರಿಸಲಾಯಿತು.

ಹರೇಕಳ ಗ್ರಾಮ ಸಮಿತಿ ಅಧ್ಯಕ್ಷ ಮುಹಮ್ಮದ್ ಆಸೀಫ್ ದ್ವಜಾರೋಹಣಗೈದು ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ತ್ವಾಹ ಜುಮಾ ಮಸ್ಜಿದ್ ಕೋಶಾಧಿಕಾರಿ ಮುಹಮ್ಮದ್ ಆರೀಸ್, ಮಾಜಿ ಕಾರ್ಯದರ್ಶಿ ಹಮೀದ್ ಹೆಚ್, ಕರ್ನಾಟಕ ಮುಸ್ಲಿಂ ಜಮಾಅತ್ ನ್ಯೂಪಡ್ಪು ಶಾಖಾ ಕಾರ್ಯದರ್ಶಿ ಜಮಾಲ್ ಅಹ್ಮದ್, TJM ಗಲ್ಫ್ ಸಮಿತಿ ಅಧ್ಯಕ್ಷ ಮುಹಮ್ಮದ್ ಹಕೀಮ್, ಎಸ್ಡಿಪಿಐ ನಾಯಕರಾದ ಝ್ಕೈನುದ್ದೀನ್, ನುಹ್ಮಾನ್, ಶಾಜುದ್ದೀನ್, ಅಸೀಫ್ ಆಚಿ ಹಾಗು ಕಾರ್ಯಕರ್ತರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಜರಿದ್ದರು.

ಹರೇಕಳ ಗ್ರಾಮ ಸಮಿತಿ ಕಾರ್ಯದರ್ಶಿ ಇಬ್ರಾಹಿಂ ಹರೇಕಳ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ದ್ವನ್ಯವಾದಗೈದರು.

Join Whatsapp