ಎರಡು ದಿನಗಳಲ್ಲಿ ಬಿಬಿಎಂಪಿ ಪೇಪರ್ ಗಳನ್ನು ಮುಂದೆ ಇಡ್ತೀವಿ: ಹೆಚ್ ಡಿಕೆ

Prasthutha|

ಬೆಂಗಳೂರು: ಇನ್ನೆರಡು ದಿನಗಳಲ್ಲಿ ಬಿಬಿಎಂಪಿ ಪೇಪರ್ ಗಳನ್ನು ಮುಂದೆ ಇಡುತ್ತೇವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

- Advertisement -


77ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಹೆಚ್ ಡಿಕೆ, ಮಂತ್ರಿಗಳು ಹೇಳ್ತಾರೆ ಹೊಸ ಟೆಂಡರ್ ಕೊಟ್ಟಿಲ್ಲ ಅಂತಾ. ನಾವು ಹೇಳ್ತಾ ಇರೋದು ಹಳೆಯ ಟೆಂಡರ್ ವಿಚಾರನೆ. ಅದನ್ನು ಯಾಕೆ ಕೊಟ್ಟಿಲ್ಲ ಅಂತ ಕೇಳ್ತಾ ಇದ್ದೀವಿ. ಇನ್ನೊಂದು ಎರಡು ದಿನ ಬಿಬಿಎಂಪಿ ಪೇಪರ್ ಗಳು ಇವೆ. ಅವುಗಳನ್ನು ಮುಂದೆ ಇಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.


ನಾನು ವಿರೋಧ ಪಕ್ಷವಾಗಿ ಕೆಲಸ ಮಾಡ್ತಾ ಇದ್ದೀನಿ. ಅದಕ್ಕೆ ಜಾತಿ ರಕ್ಷಣೆ ಪಡೆಯೋದು, ಕುಮಾರಸ್ವಾಮಿ ಜಾತಿ ಬಗ್ಗೆ ಮಾತಾಡ್ತಾರೆ ಅನ್ನೋದು. ನನಗೆ ಹೊಟ್ಟೆ ಉರಿ ಅಂತಾರೆ. ಜನ ನಿಮ್ಮನ್ನು ನಂಬಿ ಮತ ಹಾಕಿದ್ದಾರೆ. ನಾನು ವಿರೋಧ ಪಕ್ಷವಾಗಿ ಕೆಲಸ ಮಾಡ್ತಾ ಇದ್ದೀನಿ. ವಿದೇಶದಲ್ಲಿ ಪರ್ಮನೆಂಟ್ ಆಗಿ ಕೂರಲು ಹೋಗಿರಲಿಲ್ಲ. ನಾನು ಹಳ್ಳಿ ಮಗನೇ. ಪ್ರಪಂಚ ಹೇಗಿದೆ ಎಂದು ನೋಡಲು ಹೋಗಿದ್ದೆ ಎಂದು ತಿಳಿಸಿದ್ದಾರೆ.

- Advertisement -

ನಮ್ಮ ದೇಶದಲ್ಲಿ ನೂರಾರು ಈಸ್ಟ್ ಇಂಡಿಯಾ ಕಂಪನಿ ಹುಟ್ಟಿಕೊಂಡಿವೆ. ಸ್ವಾತಂತ್ರ್ಯ ಬಂದ ನಂತರವೂ ಈಸ್ಟ್ ಇಂಡಿಯಾ ಕಂಪನಿಯ ಪಳೆಯುಳಿಕೆಯನ್ನು 2 ಪಕ್ಷಗಳು ಪಡೆದಿವೆ. ಇದೊಂದು ಅನಾಗರಿಕ ಸರ್ಕಾರ. ಎಲ್ಲರನ್ನೂ ಹೆದರಿಸಿ ಬೆದರಿಸಿ ಇಡುತ್ತಿದೆ ಎಂದು ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಂದು ಬ್ರಿಟಿಷರು ಭಾರತದ ಸಂಪತ್ತನ್ನ ಹೊತ್ತೊಯ್ದರು, ಇಂದು ಬಂಡವಾಳಿಗರ ಬಳಿ ಶೇಖರಣೆಗೊಳ್ತಿದೆ: ಸಿದ್ದರಾಮಯ್ಯ

Join Whatsapp