ಸಜಿಪ ಮುನ್ನೂರಿನಲ್ಲಿ ಬಗೆಹರಿಯದ ನೀರಿನ ಸಮಸ್ಯೆ: PDO ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ SDPI

Prasthutha|

ಬಂಟ್ವಾಳ: ಸಜೀಪ ಮುನ್ನೂರು ಗ್ರಾಮದಲ್ಲಿ ನಿರಂತರವಾಗಿ ನೀರಿನ ಸಮಸ್ಯೆಯು ಎದುರಿಸುತ್ತಿದ್ದು, ಈ ಸಮಸ್ಯೆಯನ್ನು ಎಸ್ ಡಿ ಪಿ ಐ ಮನಗಂಡು ಹಲವು ಬಾರಿ ಪಿಡಿಒ ಬಳಿ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಸಕಾರಾತ್ಮಕ ‌ಸ್ಪಂದನೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ PDO ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ SDPI ದೂರು ನೀಡಿದೆ.

- Advertisement -

ಗ್ರಾಮ ವ್ಯಾಪ್ತಿಯ ನಂದಾವರದಲ್ಲಿ 3 ಕೊಳವೆ ಬಾವಿ ಇದ್ದು, ಅದರಲ್ಲಿ  2 ಕೊಳವೆ ಬಾವಿ ಹದಗೆಟ್ಟಿದೆ. ಉಳಿದ ಒಂದು ಕೊಳವೆ ಬಾವಿಯಿಂದ ಸುಮಾರು ಐನೂರು ಮನೆಗಳಿಗೆ ನೀರು ಪೂರೈಕೆ ಆಗಬೇಕಿದೆ. ಇದ್ದರಿಂದ ಸಮರ್ಪಕವಾಗಿ ನಂದಾವರ ಪ್ರದೇಶದಲ್ಲಿ ನೀರು ಸರಬರಾಜು ಆಗುತ್ತಿಲ್ಲ. ಈ ಅವ್ಯವಸ್ಥೆಯು ನಾಗರಿಕ ವಲಯದಲ್ಲಿ ಅತೀ ಹೆಚ್ಚು ನೀರಿನ ಅಭಾವದ ಸಮಸ್ಯೆಯು ಉಂಟಾಗುತ್ತಿದ್ದು, ಅದರಲ್ಲೂ ಮುಖ್ಯವಾಗಿ ಮದರಸ ಮತ್ತು ಶಾಲಾ ಪರೀಕ್ಷೆ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳು ಕೂಡ ಈ ಸಮಸ್ಯೆಯ ಭಾಗವಾಗಿದ್ದಾರೆ. ಈ ಸಮಸ್ಯೆಯನ್ನು ಎಸ್ ಡಿ ಪಿ ಐ ಮನಗಂಡು ಹಲವು ಬಾರಿ ಪಿಡಿಒ ಬಳಿ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಸಕಾರಾತ್ಮಕ ‌ಸ್ಪಂದನೆ ನೀಡಿಲ್ಲ. ಆದ್ದರಿಂದ ಈ ಸಮಸ್ಯೆಯ ನಿಭಾವಣೆಯಲ್ಲಿ ಪಿಡಿಒ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಸಜೀಪ ಮುನ್ನೂರು ಗ್ರಾಮ ಪಂಚಾಯತ್ ಎಸ್ ಡಿ ಪಿ ಐ ಬೆಂಬಲಿತ ಪಂಚಾಯತ್ ಸದಸ್ಯರು ಮತ್ತು ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ‌ ಸಮಿತಿ ಸದಸ್ಯರಾದ ಮುಸ್ತಾಕ್ ತಲಪಾಡಿ ಇವರ ನಿಯೋಗದಿಂದ ಪಿಡಿಒ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದೆ.

ಪಿಡಿಒ ಮತ್ತು ಗುತ್ತಿಗೆದಾರರ ನಡುವೆ ವೈಷಮ್ಯ- ವೈಮನಸ್ಸು ಇದ್ದು ಇದ್ದರಿಂದಾಗಿ ಸಮಸ್ಯೆ ಪರಿಹಾರವಾಗುತ್ತಿಲ್ಲ ಮತ್ತು ಇವರ ಒಳ ಜಗಳದಿಂದ 2023-24ನೇ ಹಣಕಾಸು ಯೋಜನೆಯ‌ ಮೂಲಕ ಮಂಜೂರಾದ 50 ಲಕ್ಷ‌ ರೂಪಾಯಿ ಮೊತ್ತವನ್ನು ಯಾವುದೇ ಅಭಿವೃದ್ಧಿ ಕಾರ್ಯ ನಡೆಸಲು ವಿನಿಯೋಗಿಸಿದೇ ಇದ್ದಾರೆ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಇದನ್ನೆಲ್ಲಾ ಮನಗಂಡು ಜಿಲ್ಲಾಧಿಕಾರಿಗಳು ಆದಷ್ಟು ಬೇಗ ಪಿಡಿಒ ವಿರುದ್ಧ ಕ್ರಮ ಕೈಗೊಂಡು ಸಜೀಪ ಮುನ್ನೂರು ಗ್ರಾಮದ ನೀರಿನ ಸಮಸ್ಯೆಗೆ ಆಸರೆಯಾಗಬೇಕೆಂದು ಕೇಳಿಕೊಂಡರು.

Join Whatsapp