ಸಮಾಜ ಸೇವಕ ಕೆ.ಎ.ಮುಹಮ್ಮದ್ (ಬಿ.ಎಸ್.ಟಿ. ಬಾವಾಕ) ನಿಧನ

Prasthutha|

ಸದಾ ಅಶಕ್ತರ ಪರ ಮಿಡಿಯುತ್ತಿದ್ದ ಅಜ್ಜಿನಡ್ಕದ ಕೆ ಎ ಮುಹಮ್ಮದ್ ಅವರು ನಿಧನರಾಗಿದ್ದಾರೆ. ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ವಿದೇಶದಲ್ಲಿದ್ದಾಗ ಕೂಡಾ ಅಲ್ಲಿನ ಅನಿವಾಸಿ ಭಾರತೀಯರ ಪರ ಸಹಾಯಕ್ಕೆ ಸದಾ ಮುಂಚೂಣಿಯಲ್ಲಿರುತ್ತಿದ್ದರು.

- Advertisement -

ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿದ್ದ ಇವರು ಬಿ.ಎಸ್.ಟಿ. ಬಾವಾಕ ಎಂಬ ಹೆಸರಿನಿಂದ ಚಿರಪರಿಚಿತರಾಗಿದ್ದರು‌. ಕಳೆದ 35 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡಿಕೊಂಡಿದ್ದ ಅವರು, ಅನಿವಾಸಿಗರ ಸಂಕಷ್ಟಕ್ಕೆ ಸದಾ ಮಿಡಿಯುತ್ತಿದ್ದರು.

ಸೇವೆಯಲ್ಲಿ ತೊಡಗಿದ್ದ ಸಂದರ್ಭ

ಇಂಡಿಯನ್ ಸೋಷಿಯಲ್ ಫಾರಂ ಅಭಾ ಘಟಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಅನಿವಾಸಿ ಭಾರತೀಯರ ಮೃತದೇಹಗಳನ್ನು ಊರಿಗೆ ತಲುಪಿಸಲು, ಸೌದಿ ಅರೇಬಿಯಾದ ಕಾರ್ಮಿಕ ಇಲಾಖೆಯ ಸಹಕಾರದೊಂದಿಗೆ ಹಲವಾರು ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಹಲವು ರೀತಿಯ ಅನಾರೋಗ್ಯದ ಸಮಸ್ಯೆಗಳು ಕಾಡುತ್ತಿದ್ದರೂ, ಇವರು ಸಾಮಾಜಿಕ ಸೇವಾ ಕಾರ್ಯಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು.

- Advertisement -

ಮುಹಮ್ಮದ್ ಅವರ ನಿಧನಕ್ಕೆ SDPI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸಂತಾಪ

SDPI ಅಜ್ಜಿನಡ್ಕ ಘಟಕದ ಸಕ್ರಿಯ ಕಾರ್ಯಕರ್ತ ಕೆ.ಎ.ಮುಹಮ್ಮದ್ (58)ರವರ ನಿಧನಕ್ಕೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ದ‌.ಕ.ಜಿಲ್ಲಾ ಸಮಿತಿ ತೀವ್ರ ಸಂತಾಪ ಸೂಚಿಸಿದೆ. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸೃಷ್ಟಿಕರ್ತನು ಕುಟುಂಬಕ್ಕೆ, ಸ್ನೇಹಿತರಿಗೆ ಅವರ ನಿಧನದ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಎಸ್‌.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ್ ಐ ಎಂ ಆರ್ ಅವರು ಹೊರಡಿಸಿರುವ ಸಂತಾಪ ಸೂಚಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp