SDPI ಬೋಳಿಯಾರ್ ಗ್ರಾಮ ಸಮಿತಿ ವತಿಯಿಂದ ವಕೀಲ ಎಮ್.ಎಸ್ ಅಸ್ಫಾಕ್ ರವರಿಗೆ ಸನ್ಮಾನ

Prasthutha|

ಬೋಳಿಯಾರ್ : ಎಸ್.ಡಿ.ಪಿ.ಐ ಬೋಳಿಯಾರ್ ಗ್ರಾಮ ಸಮಿತಿ ವತಿಯಿಂದ ಇತ್ತೀಚೆಗೆ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಇದರ ಸದಸ್ಯತ್ವವನ್ನು ಸ್ವೀಕರಿಸಿ ವಕೀಲ ವೃತ್ತಿಗೆ ಅಧಿಕೃತವಾಗಿ ಪಾದಾರ್ಪಣೆಗೈದು ಬಿ.ಸಿ.ರೋಡಿನ ಸಿವಿಲ್ ಕೋರ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಳಿಯಾರ್ ಗ್ರಾಮದ ಯುವಕ ವಕೀಲ ಎಮ್.ಎಸ್ ಅಸ್ಫಾಕ್ ರವರನ್ನು ಪಕ್ಷದ ಕಛೇರಿಯಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರಯುತವಾಗಿ  ಸನ್ಮಾನಿಸಲಾಯಿತು.

- Advertisement -

ಸನ್ಮಾನ ಸ್ವೀಕರಿಸಿ ಸಭೆಯನ್ನು ಉದ್ದೇಶಿಸಿ ಮತನಾಡಿದ ವಕೀಲ ಅಸ್ಫಾಕ್ ರವರು ಪ್ರಸಕ್ತ ಸನ್ನಿವೇಶದ ಕುರಿತು ಹಾಗೂ ಬೋಳಿಯಾರ್ ಗ್ರಾಮದ ಪ್ರತಿಯೊಂದು ಮನೆಯ ಮಕ್ಕಳಿಗೂ ವಿದ್ಯಾಭ್ಯಾಸದ ಮಹತ್ವದ ಬಗ್ಗೆ ಅರಿವು ಮೂಡಿಸುವುದರ ಮೂಲಕ ಭವಿಷ್ಯದಲ್ಲಿ ಸರಕಾರಿ ಉದ್ಯೋಗಗಳಲ್ಲಿ ಉನ್ನತಮಟ್ಟದ ಅಧಿಕಾರಿಗಳನ್ನಾಗಿ  ಬೋಳಿಯಾರ್ ಗ್ರಾಮದಿಂದ ಪ್ರತಿನಿಧಿಸುವ ಹಾಗೆ ನಾವೆಲ್ಲರೂ ಪ್ರಮಾಣಿಕವಾಗಿ ಶಕ್ತಿಮೀರಿ ಪ್ರಯತ್ನಿಸಬೇಕೆಂದು ಹಿತ ವಚನಗಳನ್ನು ನೀಡುವುದರೊಂದಿಗೆ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಈ ಸಂಧರ್ಭದಲ್ಲಿ ಎಸ್.ಡಿ.ಪಿ.ಐ ಉಳ್ಳಾಲ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ ಕೊಣಾಜೆ ಬ್ಲಾಕ್ ಉಪಾಧ್ಯಕ್ಷರಾದ ಶರೀಫ್ ರಂತಡ್ಕ, ಬೋಳಿಯಾರ್ ಗ್ರಾಮ ಪಂಚಾಯತ್ ಸದಸ್ಯರಾದ ಹನೀಫ್ ರಂತಡ್ಕ, ಎಸ್.ಡಿ.ಪಿ.ಐ ಮುಖಂಡರಾದ ರಹಿಮಾನ್ ಮಠ, ಎಸ್.ಡಿ.ಪಿ.ಐ ಉಳ್ಳಾಲ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಆರೀಫ್ ಕಾಪಿಕಾಡ್ ಬೋಳಿಯಾರ್ ಗ್ರಾಮಸಮಿತಿ ಅಧ್ಯಕ್ಷರಾದ ಅಶ್ರಫ್ ಮೋನು ಬೋಳಿಯಾರ್, ಕಾರ್ಯದರ್ಶಿ ಕಬೀರ್ ರಂತಡ್ಕ , ಎಸ್.ಡಿ.ಪಿ.ಐ ಮುಖಂಡರಾದ ಅಝೀಝ್ ಮದಕ ಸಿರಾಜ್ ಪಲ್ಲ, ಶರ್ವನ್ ಬೋಳಿಯಾರ್, ಶಬೀರ್ ಅಮ್ಮೆಂಬಳ ಉಪಸ್ಥಿತರಿದ್ದರು.

Join Whatsapp