ಬಿಹಾರ : ಪಾಟ್ನಾ ನಗರದ ಫುಲ್ಪರಿ ಷರೀಫ್ ಪ್ರದೇಶದಲ್ಲಿರುವ ಶಾಲೆಯೊಂದರ ಐದನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲನಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಸಹ ಆರೋಪಿ ಶಾಲಾ ಅದ್ಯಾಪಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ನ್ಯಾಯಾಧೀಶ ಅವದೇಶ್ ಕುಮಾರ್ ಅವರು ಪೊಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಸೋಮವಾರ ಶಾಲೆಯ ಪ್ರಾಂಶುಪಾಲ ಅರವಿಂದ ಕುಮಾರ್ ಅವರಿಗೆ ಮರಣದಂಡನೆ ಮತ್ತು ಒಂದು ಲಕ್ಷ ರೂ ದಂಡ ವಿಧಿಸಿದರು. ಆದ್ಯಾಪಕನಾಗಿದ್ದ ಸಹ ಆರೋಪಿ ಅಭಿಷೇಕ್ ಕುಮಾರನಿಗೆ ಜೀವಾವಧಿ ಶಿಕ್ಷೆ ಮತ್ತು 50,000 ರೂ ದಂಡ ವಿಧಿಸಿದ್ದಾರೆ.
ಪ್ರಕರಣವು 2018ರ ಸಪ್ಟೆಂಬರಿನಲ್ಲಿ ವರದಿಯಾಗಿದ್ದು, ಸಂತ್ರಸ್ತೆ 11ರ ಹರೆಯದ ಬಾಲಕಿ ಗರ್ಭಿಣಿಯಾಗಿದ್ದು ನಿರಂತರ ಆನಾರೋಗ್ಯಕ್ಕೆ ಒಳಗಾಗುತ್ತಿದ್ದಳು. ವೈದ್ಯರನ್ನು ಸಂಪರ್ಕಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದ್ದು ಹೆತ್ತವರು ಬಾಲಕಿಯನ್ನು ವಿಚಾರಿಸಿದ ನಂತರ ಆ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾಳೆ.
ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.