ನ್ಯಾಯಾಂಗ ನಿಂದನೆ ಕೇಸ್ | ಕುನಾಲ್ ಕಮ್ರಾ, ರಚಿತಾ ತನೇಜಾ ವಿರುದ್ಧ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ

Prasthutha|

ನವದೆಹಲಿ : ಕೋರ್ಟ್ ಮತ್ತು ನ್ಯಾಯಮೂರ್ತಿಗಳ ವಿರುದ್ಧ ಟ್ವೀಟ್ ಮಾಡಿರುವ ಕಾಮಿಡಿಯನ್ ಕುನಾಲ್ ಕಮ್ರಾ ಮತ್ತು ವ್ಯಂಗ್ಯ ಚಿತ್ರಗಾರ್ತಿ ರಚಿತಾ ತನೇಜಾ ವಿರುದ್ಧ ಸುಪ್ರೀಂ ಕೋರ್ಟ್ ಶುಕ್ರವಾರ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ನೋಟಿಸ್ ಜಾರಿಗೊಳಿಸಿದೆ. ಇಬ್ಬರಿಗೂ ವೈಯಕ್ತಿಕವಾಗಿ ಕೋರ್ಟ್ ಗೆ ಹಾಜರಾಗುವ ಅನಿವಾರ್ಯತೆ ಇಲ್ಲ.  

- Advertisement -

ಅರ್ಜಿದಾರರ ಪರವಾಗಿ ಕೋರ್ಟ್ ಗೆ ಗುರುವಾರ ಹಾಜರಾಗಿದ್ದ ನ್ಯಾಯವಾದಿ ನಿಶಾಂತ್ ಆರ್. ಕತ್ನೇಶ್ವರ್ ಕರ್ ಅವರ ವಾದವನ್ನು ನ್ಯಾ. ಅಶೋಕ್ ಭೂಷಣ್ ಮತ್ತು ನ್ಯಾ. ಆರ್.ಎಸ್. ರೆಡ್ಡಿ. ನ್ಯಾ. ಎಂ.ಆರ್. ಶಾ ನ್ಯಾಯಪೀಠ ಆಲಿಸಿತ್ತು. ನ್ಯಾಯಾಂಗಕ್ಕೆ ಅವಮಾನಕಾರಿಯಾದ ಹಲವು ಟ್ವೀಟ್ ಗಳನ್ನು ಕುನಾಲ್ ಕಮ್ರಾ ಮಾಡಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದರು. ಇದೇ ವೇಳೆ ರಚಿತಾ ತನೇಜಾ ಕುರಿತ ಪ್ರಕರಣದ ಬಗ್ಗೆಯೂ ನ್ಯಾಯಪೀಠ ಗಮನಕ್ಕೆ ತೆಗೆದುಕೊಂಡಿತ್ತು.

ಬಿಜೆಪಿ ಬೆಂಬಲಿಗ ಪತ್ರಕರ್ತ, ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧದ ಆತ್ಮಹತ್ಯೆ ಪ್ರಚೋದನೆ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಜಾಮೀನು ನಿರಾಕರಿಸಿದ್ದ ತೀರ್ಪಿನ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ನಿರ್ವಹಿಸಿದ ಸಂದರ್ಭ ಕುನಾಲ್ ಕಮ್ರಾ ಮತ್ತು ರಚಿತಾ ತನೇಜಾ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳನ್ನು ತಮ್ಮದೇ ರೀತಿಯಲ್ಲಿ ವ್ಯಕ್ತಪಡಿಸಿದ್ದರು.



Join Whatsapp