ಸಾವಿನಲ್ಲೂ ಒಂದಾದ ದಂಪತಿ | ಪತಿ ಸಾವಿನ ಸುದ್ದಿ ಕೇಳಿ ಪತ್ನಿಯೂ ನಿಧನ

Prasthutha|

ಚಿಕ್ಕಮಗಳೂರು : ಇಲ್ಲಿನ ಕಳಸಾಪುರ ಸಮೀಪದ ಗಾಡಿಹಳ್ಳಿಯಲ್ಲಿ ಹಿರಿಯ ದಂಪತಿಗಳು ಸಾವಿನಲ್ಲೂ ಒಂದಾದ ಘಟನೆ ನಡೆದಿದೆ. ಗ್ರಾಮದ ದೊಡ್ಡ ರಾಜಣ್ಣ ಎನ್ನುವವರಿಗೆ ಗುರುವಾರ ಅನಾರೋಗ್ಯ ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಆದರೆ, ಪರಿಶೀಲನೆ ಮಾಡಿದಾಗ ದೊಡ್ಡ ರಾಜಣ್ಣ ಸಾವಿಗೀಡಾಗಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಇದೇ ವೇಳೆ ದೊಡ್ಡರಾಜಣ್ಣ ಅವರ ಪತ್ನಿ ರುದ್ರಮ್ಮಗೂ ಪತಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಹೃದಯಾಘಾತವಾಗಿ, ಕೊನೆಯುಸಿರೆಳೆದಿದ್ದಾರೆ. ಕುಟುಂಬದಲ್ಲಿ ಈಗ ದುಃಖದ ವಾತಾವರಣ ಸೃಷ್ಟಿಯಾಗಿದೆ.   

- Advertisement -