ಮತ್ತೆ 14 ಕೋವಿಡ್ ಮರಣವನ್ನು ದೃಢಪಡಿಸಿದ ಸೌದಿ ಪ್ರಾಧಿಕಾರ

Prasthutha|

ರಿಯಾದ್ : ಸೌದಿ ಅರೇಬಿಯಾ ಶುಕ್ರವಾರದಂದು ಕೋವಿಡ್ 19 ನಿಂದಾಗಿ 14 ಜನರು ಸಾವನ್ನಪ್ಪಿದ್ದಾರೆಂದು ಸೌದಿ ಆರೋಗ್ಯ ಇಲಾಖೆ ಖಚಿತಪಡಿಸಿದೆ. ಅದೇ ರೀತಿ 954 ಹೊಸ ಸೋಂಕಿತ ವ್ಯಕ್ತಿಗಳು ಪತ್ತೆಯಾಗಿರುವುದಾಗಿ ತಿಳಿಸಿದೆ.

- Advertisement -

ಹೊಸ ಪ್ರಕರಣದಲ್ಲಿ ಮಕ್ಕಾ 182, ರಿಯಾದ್ 164, ಪೂರ್ವ ಪ್ರಾಂತ್ಯ 152, ಅಸೀರ್ 102, ಜಝಾನ್ 98, ಮದೀನಾ 66, ಹೈಲ್ 32, ನಝ್ರಾನ್ 28, ತಬೂಕ್ 20, ಉತ್ತರ ಗಡಿಯಲ್ಲಿ 16, ಅಲ್- ಬಹಾ 16, ಅಲ್-ಔಫ್ 10 ದಾಖಲಾಗಿದೆ. ಅದೇ ರೀತಿ ಕೊರೊನಾ ವೈರಸ್ ನಿಂದಾಗಿ 1,014 ರೋಗಿಗಳು ಚೇತರಿಸಿಕೊಂಡಿದ್ದಾರೆ. ಈ ಮೂಲಕ ಸೌದಿ ಅರೇಬಿಯಾದಲ್ಲಿ ಒಟ್ಟು 5,13, 387 ಮಂದಿ ಚೇತರಿಕೆಗೊಂಡಿರುತ್ತಾರೆ.

ಸೌದಿ ಅರೇಬಿಯಾದಲ್ಲಿ ಇದುವರೆಗೆ ಒಟ್ಟು 8,311 ಜನರು ವೈರಸ್‌ಗೆ ಬಲಿಯಾಗಿದ್ದಾರೆ ಮತ್ತು 29 ದಶಲಕ್ಷ ಡೋಸ್‌ಗಳಷ್ಟು ಕೊರೋನಾ ವೈರಸ್ ಲಸಿಕೆಯನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯವು ದೃಢಪಡಿಸಿದೆ.

Join Whatsapp