ಕಾಮನ್ ವೆಲ್ತ್ : ಬ್ಯಾಡ್ಮಿಂಟನ್ ಡಬಲ್ಸ್ ನಲ್ಲಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಜೋಡಿಗೆ ಚಿನ್ನ

Prasthutha|

ಬರ್ಮಿಂಗ್‌ ಹ್ಯಾಮ್‌ ನಲ್ಲಿ ನಡೆಯುತ್ತಿರುವ 22ನೇ ಆವೃತ್ತಿಯ ಕಾಮನ್‌ವೆಲ್ತ್‌ ಕ್ರೀಡಾಕೂಟದ ಬ್ಯಾಡ್ಮಿಂಟನ್‌ ನಲ್ಲಿ ಸೋಮವಾರ, ಭಾರತ ಮೂರನೇ ಚಿನ್ನದ ಪದಕ ಜಯಿಸಿದೆ.

- Advertisement -

ಪುರುಷರ  ಸಿಂಗಲ್ಸ್‌ ವಿಭಾಗದಲ್ಲಿ ಲಕ್ಷ್ಯ ಸೇನ್‌ ಮತ್ತು ಮಹಿಳೆಯರ ವಿಭಾಗದಲ್ಲಿ ಪಿವಿ ಸಿಂಧು ಚಿನ್ನದ ಪದಕವನ್ನು ಗೆದ್ದ ಬಳಿಕ, ಪುರುಷರ ಡಬಲ್ಸ್‌ ವಿಭಾಗದಲ್ಲೂ ಭಾರತೀಯರು ಸ್ವರ್ಣ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭಾರತದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ, ಇಂಗ್ಲೆಂಡ್‌ ನ ಬೆನ್ ಲೇನ್/ಸೀನ್ ವೆಂಡಿ ಜೋಡಿಯನ್ನು 21-15, 21-13 ನೇರ ಸೆಟ್‌ಗಳ ಅಂತರದಲ್ಲಿ ಸೋಲಿಸಿದರು. ಆ ಮೂಲಕ  ಬ್ಯಾಡ್ಮಿಂಟನ್‌ನಲ್ಲಿ ಭಾರತ ಹ್ಯಾಟ್ರಿಕ್‌ ಚಿನ್ನದ ಪದಕದ ಸಾಧನೆ ಮಾಡಿದಂತಾಗಿದೆ.

Join Whatsapp