ಸಂತೂರ್ ಮಾಂತ್ರಿಕ ಭಜನ್ ಸೊಪೋರಿ ಇನ್ನಿಲ್ಲ

Prasthutha|

ನವದೆಹಲಿ: ಖ್ಯಾತ ಸಂತೂರ್ ವಾದಕ ಭಜನ್ ಸೊಪೋರಿ (73) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ನಂತರ ಗುರುಗ್ರಾಮ್ ಆಸ್ಪತ್ರೆಯಲ್ಲಿಂದು ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

ಕಳೆದ ವರ್ಷ ಸೊಪೋರಿ ಅವರಿಗೆ ಕರುಳಿನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಇಮ್ಯುನೊ ಥೆರಪಿ ಚಿಕಿತ್ಸೆಗಾಗಿ ಅವರು 3 ವಾರಗಳ ಹಿಂದೆ ಗುರುಗ್ರಾಮ್‌ನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ಅವರ ಪುತ್ರ ಅಭಯ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಭಜನ್ ಸೊಪೋರಿ, ತಮ್ಮ ವೃತ್ತಿಜೀವನದ ಸಾಧನೆಗಳ ಮೂಲಕ 2004 ರಲ್ಲಿ ಪದ್ಮಶ್ರೀ, 1992 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯ ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.

Join Whatsapp