ಸಂಘಪರಿವಾರಕ್ಕೆ ಸಡ್ಡು ಹೊಡೆದು ಕರಗ ಮಹೋತ್ಸವಕ್ಕೆ ಚಾಲನೆ; ತವಕ್ಕಲ್ ಮಸ್ತಾನ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ

Prasthutha|

ಬೆಂಗಳೂರು: ಕರಗ ಉತ್ಸವ ಮುಸ್ಲಿಮರ ಸಹಭಾಗಿತ್ವದೊಂದಿಗೆ ನಡೆಯಬಾರದು ಎಂದು ಕರೆ ನೀಡಿದ್ದ ಸಂಘ ಪರಿವಾರದ ಬೆದರಿಕೆಗೆ ಸಡ್ಡು ಹೊಡೆದಿರುವ ಬೆಂಗಳೂರು ಕರಗ ಉತ್ಸವ ಸಮಿತಿ,  ಪ್ರತಿವರ್ಷದಂತೆ ಈ ವರ್ಷವು ಕರಗ ಮೆರವಣಿಗೆ ತವಕ್ಕಲ್ ಮಸ್ತಾನ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನಡೆಸಿ ಜಾತ್ರೆಗೆ ಚಾಲನೆ ನೀಡಿದೆ.

- Advertisement -

ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳ ಕಾಲ ಸರಳವಾಗಿ ನಡೆದಿದ್ದ ಬೆಂಗಳೂರು ಕರಗ ಮಹೋತ್ಸವ , ಈ ಬಾರಿ ಏಪ್ರಿಲ್ 8 ರಿಂದ  18ರ ವರೆಗೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ವಿವಿಧ ಕಾರ್ಯಕ್ರಮಗಳು ನಿಗದಿಯಾಗಿವೆ.

ರಾಜ್ಯದ ಹಲವೆಡೆ ಹಿಜಾಬ್, ಹಲಾಲ್, ಆಝಾನ್ ವಿವಾದದಿಂದಾಗಿ ಅನೇಕ ಜಾತ್ರೆ, ಉತ್ಸವಗಳಲ್ಲಿನ ಭಾವೈಕ್ಯ ಸಂಬಂಧಕ್ಕೆ ಧಕ್ಕೆ ಉಂಟಾಗುತ್ತಿರುವ ಈ ಸನ್ನಿವೇಶದಲ್ಲಿ ಹಿಂದಿನ ರೂಢಿಯಂತೆ ಹಿಂದೂ-ಮುಸ್ಲಿಮರು ಹಳೆ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಲು ನಿರ್ಧರಿಸಿರುವುದು ಸ್ವಾಗತಾರ್ಹವಾಗಿದೆ.

- Advertisement -

ಬೆಂಗಳೂರಿನ ವಿಶಿಷ್ಟ ಹಬ್ಬ ಕರಗ ಉತ್ಸವಕ್ಕೆ ತನ್ನದೇ ಆದ ಐತಿಹ್ಯ ಹೊಂದಿದ್ದು, ಕೋಮು ದ್ವೇಷಕ್ಕೆ ವಿರುದ್ಧವಾಗಿ ಭಾವೈಕ್ಯ ಭಾವನೆ ಎತ್ತಿ ಹಿಡಿಯುವಲ್ಲಿ ಹಲವು ವರ್ಷಗಳಿಂದ ಯಶಸ್ವಿಯಾಗಿದೆ.

Join Whatsapp