ಮುಸ್ಲಿಮರು ಕೆತ್ತಿದ ವಿಗ್ರಹ ಪ್ರತಿಷ್ಠಾಪಿಸದಂತೆ ಅಭಿಯಾನ: ಕೋಮುದ್ವೇಷದ ಹೇಳಿಕೆ ನೀಡಿದ ಶ್ರೀನಿವಾಸನ್ ಗುರೂಜಿ ವಿರುದ್ಧ ದೂರು

Prasthutha|

ಬೆಂಗಳೂರು: ಮುಸ್ಲಿಮರು ಕೆತ್ತಿದ ವಿಗ್ರಹ ಪ್ರತಿಷ್ಠಾಪಿಸದಂತೆ ಹೊಸ ಅಭಿಯಾನ ಕೈಗೊಂಡಿದ್ದ ಮೇಲುಕೋಟೆ ದೇಗುಲದ ಹಿರಿಯ ಅರ್ಚಕ ಶ್ರೀನಿವಾಸನ್ ಗುರೂಜಿ ವಿರುದ್ಧ ಕ್ರಮಕೈಗೊಳ್ಳುವಂತೆ ಧಾರ್ಮಿಕ ದತ್ತಿ ಇಲಾಖೆಗೆ ಪತ್ರ ಬರೆಯಲಾಗಿದೆ. ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಸೇರಿದಂತೆ ಹಲವರು, ಸರ್ಕಾರಿ ಗೌರವ ವೇತನ ಪಡೆದು ಕೋಮುದ್ವೇಷದ ಹೇಳಿಕೆ ನೀಡಿದ ಶ್ರೀನಿವಾಸನ್ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

- Advertisement -

ದೇಗುಲದ ಅರ್ಚಕರಾಗಿ ಶ್ರೀನಿವಾಸನ್ ಗುರೂಜಿ ನೀಡಿದ ಹೇಳಿಕೆಯು ಕೋಮು ದ್ವೇಷಕ್ಕೆ ಎಡೆ ಮಾಡಿಕೊಡುತ್ತದೆ. ಸರ್ಕಾರದಿಂದ ಗೌರವ ವೇತನ ಪಡೆಯುತ್ತಿರುವ ಗುರೂಜಿ ಪಡೆಯುತ್ತಿದ್ದು, ಮಾತ್ರವಲ್ಲದೇ ಯಾವುದೇ ದೇವಾಲಯದ ಅರ್ಚಕ, ಸ್ಥಾನಿಕರು ಕೋಮುದ್ವೇಷ ಉಂಟು ಮಾಡುವ ಹೇಳಿಕೆ ನೀಡಬಾರದು. ಶ್ರೀನಿವಾಸನ್ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ದತ್ತಿ ಇಲಾಖೆಗೆ ದೂರು ನೀಡಲಾಗಿದೆ.

- Advertisement -

ಮೇಲುಕೋಟೆ ದೇವಸ್ಥಾನಕ್ಕೆ ಎಲ್ಲಾ ಧರ್ಮದ ಜನರು ಬರುತ್ತಿದ್ದು, ಒಬ್ಬ ಅರ್ಚಕರಾಗಿ ಈ ಬಗ್ಗೆ ಹೇಳಿಕೆ ನೀಡಿರುವುದು ಸಮಂಜಸವಲ್ಲ. ಇವರ ಹೇಳಿಕೆ ಕೋಮುದ್ವೇಷ ಉಂಟು ಮಾಡುತ್ತದೆ. ಕೂಡಲೇ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಈ ಬಗ್ಗೆ ಮೌಖಿಕ ಮಾಹಿತಿ ನೀಡಿರುವ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಅಧಿಕಾರಿಗಳು, ದತ್ತಿ ಇಲಾಖೆ ಸಿಬ್ಬಂದಿ ಮಾಧ್ಯಮಗಳಿಗೆ ಬಹಿರಂಗವಾಗಿ ಹೇಳಿಕೆ ನೀಡುವಂತಿಲ್ಲ, ಸಿಬ್ಬಂದಿಯೇ ಆಗಲಿ, ಅರ್ಚಕರಾಗಲಿ ಯಾವುದೆ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹೇಳಿಕೆಯನ್ನು ನೀಡಬಾರದು, ಈ ಬಗ್ಗೆ ಅಲ್ಲಿಯ ಜಿಲ್ಲಾಧಿಕಾರಿಗಳು ವರದಿ ನೀಡಿದರೆ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

Join Whatsapp