ಬಿರ್ಭೂಮ್ ಹತ್ಯೆ ಪ್ರಕರಣ: ಸಿಬಿಐನಿಂದ ನಾಲ್ವರ ಬಂಧನ

Prasthutha|

ಕೋಲ್ಕತ್ತಾ: ಬಂಗಾಳದ ಬಿರ್ ಭೂಮ್ ನಲ್ಲಿ ನಡೆದ ಹತ್ಯೆಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ-ಸಿಬಿಐ ಮುಂಬೈನಿಂದ ನಾಲ್ವರನ್ನು ಬಂಧಿಸಿದೆ.

- Advertisement -

“ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಮುಂಬೈನಿಂದ ಬಂಧಿಸಲಾಗಿದೆ” ಎಂದು ಸಿಬಿಐ  ದೃಢಪಡಿಸಿದೆ.

ಸಿಬಿಐ ಈ ಪ್ರಕರಣವನ್ನು ಕೈಗೆತ್ತಿಕೊಂಡ ನಂತರ ನಡೆಸಿದ ಮೊದಲ ಬಂಧನ ಇದಾಗಿದ್ದು, ಆರೋಪಿಗಳನ್ನು ಟ್ರಾನ್ಸಿಟ್ ರಿಮಾಂಡ್ ಮೇಲೆ ಕೋಲ್ಕತ್ತಾಗೆ ಕರೆತರಲಾಗುವುದು ಎಂದು ಮೂಲಗಳು ತಿಳಿಸಿವೆ.

- Advertisement -

ಬಂಧಿತರು ಬಪ್ಪಾ ಶೇಖ್, ಸಾಬು ಶೇಖ್ ಮತ್ತು ಇತರ ಇಬ್ಬರು ಗುರುತಿಸಲಾಗಿದ್ದು, ಘಟನೆಯ ರಾತ್ರಿ ಅವರು ಸ್ಥಳದಲ್ಲಿದ್ದರು ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

ಸಿಬಿಐ ಆರೋಪಿಗಳ ಮೊಬೈಲ್ ಫೋನ್ ಟವರ್ ಲೊಕೇಶನ್ ಗಳನ್ನು ಟ್ರ್ಯಾಕ್ ಮಾಡಿ ಅವರನ್ನು ಬಂಧಿಸಿದೆ. ಹತ್ಯೆಯ ಮರುದಿನ ಮಾರ್ಚ್ 22 ರಂದು ಮುಂಬೈಗೆ ಪರಾರಿಯಾಗಿದ್ದರು .

ಸಿಬಿಐ ಗುರುವಾರ ಪ್ರಕರಣದ ಪ್ರಾಥಮಿಕ ತನಿಖಾ ವರದಿಯನ್ನು ಕಲ್ಕತ್ತಾ ಹೈಕೋರ್ಟ್ ಗೆ ಸಲ್ಲಿಸಿದೆ. ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ರಾಜರ್ಷಿ ಭಾರದ್ವಾಜ್ ಅವರ ವಿಭಾಗೀಯ ಪೀಠದ ಮುಂದೆ ತನಿಖಾ ಸಂಸ್ಥೆಯು “ಸಾಕ್ಷ್ಯಗಳ ನಾಶ” ವನ್ನು ಉಲ್ಲೇಖಿಸಿದೆ.

Join Whatsapp