ಹಿಂದೂಗಳಿಗಾಗಿ ಹಿಂದೂ ಬ್ಯಾಂಕ್ | ಸಂಘ ಪರಿವಾರದಿಂದ ಹೊಸ ಯೋಜನೆ!

Prasthutha|

ತಿರುವನಂತಪುರಂ: ಹಿಂದೂಗಳ ಹಣ ಹಿಂದೂಗಳಿಗೆ ಎಂಬ ಬ್ಯಾಂಕ್ ಯೋಜನೆಯನ್ನು ಸಂಘಪರಿವಾರ ಕೇರಳದ ಕೆಲವೊಂದು ಸಂಸ್ಥೆಗಳ ಸಹಭಾಗಿತ್ವದಲ್ಲಿ ಆರಂಭಿಸಲು ಯೋಜನೆ ಹಾಕಿದ್ದು, ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿದೆ.

- Advertisement -

ಆಶ್ರಮಗಳು, ಮಠಗಳು, ಮಂದಿರಗಳನ್ನು ಕೇಂದ್ರೀಕರಿಸಿ 100ಕ್ಕೂ ಹೆಚ್ಚು ಕಂಪೆನಿಗಳು ಮೊದಲ ಹಂತದಲ್ಲಿ ನೋಂದಾವಣಿ ಮಾಡಿಕೊಂಡಿದ್ದು, ಒಂದು ಪ್ರದೇಶದ ಹಿಂದೂ ವ್ಯಾಪಾರಿಗಳನ್ನು ಇದರಲ್ಲಿ ಸೇರಿಸಿ ಹಿಂದೂ ಬ್ಯಾಂಕ್ ಪ್ರಾರಂಭಿಸಲು ಸಂಘಪರಿವಾರ ನಿರ್ಧರಿಸಿದೆ.

ಕಂಪೆನಿ ಆರಂಭಿಸಿದ ಒಂದು ವರ್ಷದಲ್ಲಿ 200 ಸದಸ್ಯರನ್ನು ಸೇರಿಸಬೇಕೆಂದು ನಿಬಂಧನೆ ಇದೆ. ಮೂವರು ನಿರ್ದೇಶಕರು, ಏಳು ಸದಸ್ಯರು, ಐದು ಲಕ್ಷ ರೂಪಾಯಿಯ ಶೇರು ಬಂಡವಾಳ ಇದ್ದರೆ ಕಾನೂನು ಪ್ರಕಾರ ನಿಧಿ ಲಿಮಿಟೆಡ್ ಕಂಪೆನಿ ಆರಂಭಿಸಬಹುದಾಗಿದೆ.

- Advertisement -

ಸದಸ್ಯರಿಂದ ಮಾತ್ರ ಠೇವಣಿ ಸ್ವೀಕರಿಸಿ, ಅವರಿಗೆ ಮಾತ್ರ ಸಾಲ ಕೊಡುವುದು ನಿಧಿ ಲಿಮಿಟೆಡ್ ಕಂಪೆನಿಗಳ ವಿಶೇಷತೆಯಾಗಿದೆ. ಸದಸ್ಯತ್ವಕ್ಕೆ ಕೆ.ವೈಸಿ ನಿಬಂಧನೆಗಳು ಬಾಧಕವಾಗಲಿದೆ. ಯೋಜನೆಗೆ ಹೆಚ್ಚು ಸದಸ್ಯರನ್ನು ಸೇರಿಸುವುದಕ್ಕಾಗಿ ಹಿಂದೂ ಸಂರಕ್ಷಣಾ ಪರಿವಾರ್, ಭಾರತೀಯ ಹಿಂದೂ ಪ್ರಜಾ ಸಂಘಂ ಮುಂತಾದ ಸಂಘಟನೆಗಳ ನೇತೃತ್ವದಲ್ಲಿ ವಿಶೇಷ ಅಭಿಯಾನವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾರಂಭಿಸಲಾಗಿದೆ.

Join Whatsapp