SDPI ಪಕ್ಷದ 12 ನೇ ಸಂಸ್ಥಾಪನಾ ದಿನಾಚರಣೆ

Prasthutha: June 21, 2021

ಮಂಗಳೂರು : ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಇದರ 12 ನೇ ಸಂಸ್ಥಾಪನಾ ದಿನಾಚರಣೆಯು ಇಂದು (ಜೂ 21) ದಕ್ಷಿಣ ಕನ್ನಡ ಜಿಲ್ಲಾದ್ಯಂತ ನಡೆಯಿತು. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಮಟ್ಟದಲ್ಲಿ ಬೆಳಿಗ್ಗೆ ಪಕ್ಷದ ದ್ವಜಾರೋಹಣ ಹಾಗೂ ಸಿಹಿತಿಂಡಿ ವಿತರಣೆ ಮತ್ತು ಸಮಾಜಿಕ ಕೆಲಸ ಕಾರ್ಯಗಳು ನಡೆಯಿತು ,ಈ ಕಾರ್ಯಕ್ರಮದಲ್ಲಿ ಸ್ಥಳೀಯ ನಾಯಕರು ಮತ್ತು ಕ್ಷೇತ್ರ ಸಮಿತಿಯ ನಾಯಕರು ಹಾಗೂ ಚುನಾಯಿತ ಜನ ಪ್ರತಿನಿದಿಗಳು ಭಾಗವಹಿಸಿದರು.


ಮಂಗಳೂರಿನಲ್ಲಿ ಜಿಲ್ಲಾ ಸಮಿತಿಯ ವತಿಯಿಂದ ನಡೆದ ದ್ವಜಾರೋಹಣ ವನ್ನು ಪಕ್ಷದ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆಯವರು ನೆರವೇರಿಸಿ ಸಂಸ್ಥಾಪನಾ ದಿನದ ಸಂದೇಶವನ್ನು ನೀಡಿದರು. ಕಾರ್ಯಕ್ರಮದ ನೇತೃತ್ವವನ್ನು ಜಿಲ್ಲಾದ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆಯವರು ವಹಿಸಿದ್ದರು. ಮುಖ್ಯ ಅಥಿತಿಯಾಗಿ ಆಗಮಿಸಿದ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ರಿಯಾಝ್ ಫರಂಗಿಪೇಟೆ ಪಕ್ಷದ ಅನಿವಾರ್ಯತೆ, ಮುಂದಿನ ಕಾರ್ಯಯೋಜನೆಗಳನ್ನು ವಿವರಿಸಿ ಎಂತಹ ಕಠಿಣ ಸಂದರ್ಭ ಬಂದರೂ ಕಾರ್ಯಕರ್ತರು, ನಾಯಕರು ಎಂದೆಗುಂದದೇ ದೇಶದ ಸಂವಿಧಾನ ವನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವ್ರತ್ತರಾಗಬೇಕು ಎಂದು ಕರೆ ನೀಡಿದರು. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜಲೀಲ್ ಕ್ರಷ್ಣಾಪುರ ಸಂದರ್ಭೋಚಿತವಾಗಿ ಮಾತನಾಡಿದರು.


ಈ ಸಂದರ್ಭದಲ್ಲಿ ಎಸ್ ಡಿ ಟಿ ಯ ರಾಜ್ಯ ಕಾರ್ಯದರ್ಶಿ ಶರೀಫ್ ಪಾಂಡೇಶ್ವರ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್, ಜಿಲ್ಲಾ ಉಪಾಧ್ಯಕ್ಷ ರಾದ ಇಕ್ಬಾಲ್ ಐ ಎಂ ಆರ್ ,ದಕ್ಷಿಣ ವಿದಾನಸಬಾ ಕ್ಷೇತ್ರ ಸಮಿತಿಯ ಅದ್ಯಕ್ಷರಾದ ಶುಹೈಲ್ ಖಾನ್, , ಹಾಗೂ ಇತರ ನಾಯಕರು ಉಪಸ್ಥಿತರಿದ್ದರು

ಕಾರ್ಯಕ್ರಮ ವನ್ನು ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ನಿರೂಪಿಸಿದರು, ಅನ್ವರ್ ಸಾದತ್ ಬಜತ್ತೂರು ಸ್ವಾಗತಿಸಿ ,ಅಕ್ಬರ್ ಕುದ್ರೋಳಿ ದನ್ಯವಾದ ಗೈದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!