ಸ್ಯಾಮ್ ಸಂಗ್‌ನಿಂದ ಸಾಲ್ವ್ ಫಾರ್ ಟುಮಾರೋ ಸ್ಪರ್ಧೆಗೆ ಅರ್ಜಿ ಆಹ್ವಾನ; ವಿಜೇತರಿಗೆ 1 ಕೋಟಿ ರೂ.ವರೆಗೆ ಬೆಂಬಲ

Prasthutha: July 15, 2022

ಬೆಂಗಳೂರು: ಶಿಕ್ಷಣ, ಪರಿಸರ, ಕೃಷಿ ಹಾಗೂ ಆರೋಗ್ಯ ಕ್ಷೇತ್ರವನ್ನು ಸುಧಾರಿಸುವ ನಿಟ್ಟಿನಲ್ಲಿ ನಿಮ್ಮ ಬಳಿ ಉತ್ತಮ ಯೋಜನೆ ಇದ್ದರೆ ಈಗಲೇ ಈ ಯೋಜನೆಯನ್ನು ಕಳುಹಿಸುವ ಮೂಲಕ 1 ಕೋಟಿ ರೂವರೆಗೂ ನೀವು ನೆರವು ಪಡೆಯಬಹುದು.!

ಹೌದು, ಸ್ಯಾಮ್‌ ಸಂಗ್‌ ತನ್ನ ಸಿಎಸ್‌ ಆರ್‌ ಚಟುವಟಿಕೆ ಅಡಿಯಲ್ಲಿ “ಸಾಲ್ವ್‌ ಫಾರ್‌ ಟುಮಾರೋ” (ನಾಳಿನ ಪರಿಹಾರ) ಎಂಬ ಸ್ಪರ್ಧೆಯನ್ನು ಕಾಲೇಜು ವಿದ್ಯಾರ್ಥಿಗಳಿಗಾಗಿಯೇ ಆಯೋಜಿಸಿದೆ. ಈ ದೇಶದಲ್ಲಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾದ ಇಂಧನ ತ್ಯಾಜ್ಯ, ಆರೋಗ್ಯ ಸಮಸ್ಯೆ, ಕಸದ ಸಮಸ್ಯೆ, ಶಿಕ್ಷಣದ ಕೊರತೆ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿಗೆ ನಿಮ್ಮ ಬಳಿ ಬೆಸ್ಟ್‌ ಐಡಿಯಾ ಇದ್ದರೆ ಅದನ್ನು ಈ ಸ್ಪರ್ಧೆಯಲ್ಲಿ ಕಳುಹಿಸಿಕೊಡಬಹುದು.

ಬೆಂಗಳೂರಿನ ಸ್ಯಾಮ್‌ ಸಂಗ್ ಒಪೆರಾ ಹೌಸ್‌ ನಲ್ಲಿ ಸ್ಯಾಮ್‌ ಸಂಗ್‌ ಇಂಡಿಯಾ ಆಯೋಜಿಸಿದ್ದ ಶೈಕ್ಷಣಿಕ ಮತ್ತು ಅನ್ವೇಷಣೆ ರೋಡ್‌ ಶೋನಲ್ಲಿ ಈ ಘೋಷಣೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ರೋಡ್‌ ಶೋದಲ್ಲಿ ಭಾಗವಹಿಸಿದ್ದ ಸ್ಟಾಂಡಪ್‌ ಕಾಮಿಡಿಯನ್‌ ಡಾ. ಚತುರ್ವೇದಿ, ಭಾರತ ಶಿಕ್ಷಣ, ಕುಡಿಯುವ ನೀರು, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ಯುವಜನರು ತಮ್ಮಲ್ಲಿರುವ ಐಡಿಯಾಗಳನ್ನು ಹಂಚಿಕೊಳ್ಳಬೇಕು. ಸ್ಯಾಮ್‌ ಸಂಗ್‌‌ ನಿಮಗಾಗಿ ಉತ್ತಮ ವೇದಿಯನ್ನು ಕಲ್ಪಿಸಿದೆ, ನಿಮ್ಮಲ್ಲಿ ಈ ಸಮಸ್ಯೆಗಳಿಗೆ ಪರಿಹಾರವಾಗಿ ಉತ್ತಮ ಐಡಿಯಾವಿದ್ದರೆ, ಅದನ್ನು ಪರಿಗಣಿಸಲಾಗುತ್ತದೆ.. ಈ ಸ್ಪರ್ದೆಯಲ್ಲಿ 16-22 ವರ್ಷದ ಓಳಗಿನ ವಿದ್ಯಾರ್ಥಿಗಳು ಭಾಗವಹಿಸಲು ಅರ್ಹರಾಗಿದ್ದಾರೆ. ಜುಲೈ 31ರೊಳಗೆ ನಿಮ್ಮ ಐಡಿಯಾಗಳನ್ನು ಸ್ಯಾಮ್‌ ಸಂಗ್‌ ವೆಬ್‌ಸೈಟ್‌ : www.samsung.com/in/solvefortomorrow  ನಲ್ಲಿ ಶೇರ್‌ ಮಾಡುವ ಮೂಲಕ ಆಯ್ಕೆಯಾಗಬಹುದು.

ದೇಶದ ವಿವಿಧ ಭಾಗದಿಂದ ಈವರೆಗೆ 8 ಸಾವಿರಕ್ಕೂ ಹೆಚ್ಚು ತಂಡಗಳು ಅನ್ವೇಷಣೆ ಸ್ಫರ್ಧೆಗೆ ನೋಂದಣಿ ಮಾಡಿಕೊಂಡಿವೆ. ಈ ಪೈಕಿ ಮೂರು ರಾಷ್ಟ್ರೀಯ ವಿಜೇತರು 1 ಕೋಟಿ ರೂ.ವರೆಗೆ ಬೆಂಬಲ ಪಡೆಯುತ್ತಾರೆ ಮತ್ತು ಐಐಟಿ ದೆಹಲಿಯ ಪರಿಣಿತರ ಮಾರ್ಗದರ್ಶನದೊಂದಿಗೆ ಮುಂದಿನ ಹಂತಕ್ಕೆ ತಮ್ಮ ಐಡಿಯಾಗಳನ್ನು ತೆಗೆದುಕೊಂಡು ಹೋಗಲು ಆರು ತಿಂಗಳುಗಳವರೆಗೆ ಮಾರ್ಗದರ್ಶನವನ್ನು ಪಡೆಯುತ್ತಾರೆ.

ಸಾಲ್ವ್‌ ಫಾರ್ ಟುಮಾರೋ ವಿವರ

•         ಯಾರು ಭಾಗವಹಿಸಬಹುದು: 16-22 ವರ್ಷದವರು, ವೈಯಕ್ತಿಕವಾಗಿ ಅಥವಾ 3 ರ ವರೆಗಿನ ತಂಡದಲ್ಲಿ

•         ಅರ್ಜಿ ಥೀಮ್‌ಗಳು: ಶಿಕ್ಷಣ, ಪರಿಸರ, ಆರೋಗ್ಯ ಸೇವೆ ಮತ್ತು ಕೃಷಿ

•         ಅವರು ಏನನ್ನು ಪಡೆಯುತ್ತಾರೆ: ಆನ್‌ಲೈನ್‌ ತರಬೇತಿ, ಸ್ಯಾಮ್‌ ಸಂಗ್‌ ಮತ್ತು ಐಐಟಿ ದೆಹಲಿಯಂದ ಮಾರ್ಗದರ್ಶನ, ಐಐಟಿ ದೆಹಲಿಯಲ್ಲಿ ಬೂಟ್‌ ಕ್ಯಾಂಪ್‌

•         ವಿಜೇತರು ಏನನ್ನು ಪಡೆಯುತ್ತಾರೆ: 3 ವಿಜೇತ ತಂಡಗಳಿಗೆ ರೂ. 1 ಕೋಟಿವರೆಗೆ ಮೊತ್ತ, 6 ತಿಂಗಳವರೆಗೆ ಮಾರ್ಗದರ್ಶನ

•         ಎಲ್ಲಿ ಅರ್ಜಿ ಸಲ್ಲಿಸಬಹುದು: www.samsung.com/in/solvefortomorrow

•         ಯಾವ ದಿನಾಂಕದವರೆಗೆ ಅರ್ಜಿ ಸಲ್ಲಿಸಬಹುದು: ಸಂಜೆ 5 ಗಂಟೆ, ಜುಲೈ 31, 2022

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ