ಕೇಸರಿ ಧ್ವಜ ಭವಿಷ್ಯದಲ್ಲಿ ರಾಷ್ಟ್ರಧ್ವಜವಾಗಬಹುದು: ಈಶ್ವರಪ್ಪ ಮತ್ತೆ ವಿವಾದ !

Prasthutha|

ಬೆಂಗಳೂರು: ಕಮಿಷನ್ ಆರೋಪಕ್ಕೆ ಸಂಬಂಧಿಸಿ ಸಚಿವ ಸ್ಥಾನ ಕಳೆದುಕೊಂಡಿರುವ ಕೆ ಎಸ್ ಈಶ್ವರಪ್ಪ ಮತ್ತೆ ವಿವಾದ ಸೃಷ್ಟಿಸಿದ್ದಾರೆ. ಕೇಸರಿ ಧ್ವಜವು ಭವಿಷ್ಯದಲ್ಲಿ ದೇಶದ ರಾಷ್ಟ್ರಧ್ವಜವಾಗಬಹುದು ಎಂದು ಈಶ್ವರಪ್ಪ ಪುನರುಚ್ಚರಿಸಿದ್ದಾರೆ.

- Advertisement -

ಕೇಸರಿ ಧ್ವಜಕ್ಕೆ ಈ ನಾಡಿನಲ್ಲಿ ಹಿಂದಿನಿಂದಲೂ ಗೌರವವಿದ್ದು, ಸಾವಿರಾರು ವರ್ಷಗಳ ಇತಿಹಾಸವಿದೆ. ಕೇಸರಿ ಧ್ವಜ ತ್ಯಾಗ ಬಲಿದಾನದ ಸಂಕೇತವಾಗಿದೆ, RSS ಕಚೇರಿಯಲ್ಲಿ ಕೇಸರಿ ಧ್ವಜದ ಮುಂದೆ ಅದನ್ನು ಮೈಗೂಡಿಸಿಕೊಳ್ಳಲು ಪ್ರಾರ್ಥಿಸುತ್ತೇವೆ. ದೇಶದಲ್ಲಿ ಕೇಸರಿ ಧ್ವಜವು ಮುಂದೊಂದು ದಿನ ರಾಷ್ಟ್ರಧ್ವಜವಾಗಬಹುದು, ಅದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಕಳೆದ ಫೆಬ್ರವರಿ ತಿಂಗಳಲ್ಲಿ ಈಶ್ವರಪ್ಪ ತ್ರವರ್ಣ ಧ್ವಜ ಬದಲಾಯಿಸುವ ಕುರಿತು ಲಾಗೆ ಹರಿಯಬಿಟ್ಟಿದ್ದು ವಿವಾದಕ್ಕೆ ಕಾರನವಾಗಿತ್ತು. ಈಶ್ವರಪ್ಪ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಈಶ್ವರಪ್ಪ ಹೇಳಿಕೆ ವಿರುದ್ಧ ವಿಧಾನಸಭೆ ಅಧಿವೇಶನದಲ್ಲಿ ವಿಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದವು.

Join Whatsapp