ಜೀವಂತ ಹಾವನ್ನೇ ಹಾರದಂತೆ ಬದಲಿಸಿಕೊಂಡ ನವಜೋಡಿ !

Prasthutha|

ತಮಿಳುನಾಡು: ಮದುವೆಯ ವೇಳೆ ವಧು ಮತ್ತು ವರ ಜೀವಂತ ಹಾವುಗಳನ್ನೇ ಹಾರವನ್ನಾಗಿ ಪರಸ್ಪರ ಬದಲಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.

- Advertisement -

ವರ ದೊಡ್ಡ ಹೆಬ್ಬಾವನ್ನು ತಂದು ಕೊರಳಿಗೆ ಹಾಕಿದರೂ ಭಯಪಡದೇ ಹಾರವನ್ನಾಗಿ ವಧು ಸ್ವೀಕರಿಸಿದ್ದಾಳೆ. ಇದಾದ ಬಳಿಕ ವಧು ಕೂಡ ನಾಗರಹಾವನ್ನು ವರನ ಕೊರಳಿಗೆ ಹಾಕಿದ್ದಾಳೆ. ವಧು- ವರರಿಬ್ಬರೂ ಯಾವ ಭಯವಿಲ್ಲದೇ, ಹಾವನ್ನು ಹಾರದಂತೆ ಬದಲಿಸಿಕೊಂಡಿದ್ದನ್ನು ನೂರಾರು ಜನರು ಸುತ್ತಲೂ ನಿಂತುಕೊಂಡು ನೋಡಿದ್ದಾರೆ.

ಹಾವನ್ನು ಹಾರವಾಗಿ ಬದಲಿಸಿಕೊಂಡು ವಿವಾಹವಾದ ವಧು-ವರರು ಅರಣ್ಯ ಇಲಾಖೆಯ ನೌಕರರಾಗಿದ್ದಾರೆ. ಮದುವೆಯಲ್ಲಿ ಹಾವುಗಳನ್ನು ಬದಲಿಸಿಕೊಂಡ ಬಳಿಕ ಅವುಗಳನ್ನು ಮತ್ತೆ ಕಾಡಿಗೆ ಬಿಡಲಾಗಿದೆ ಎಂದು ತಿಳಿದು ಬಂದಿದೆ.

Join Whatsapp