ವಿಲ್ಲಾದಲ್ಲಿ ಹೈಡ್ರೋ ಗಾಂಜಾ ಬೆಳೆ: 1 ಕೋಟಿ ಮೌಲ್ಯದ ಡ್ರಗ್ಸ್ ವಶ, ನಾಲ್ವರ ಬಂಧನ

Prasthutha|

ಬೆಂಗಳೂರು: ಮಾದಕ ವಸ್ತು ಪ್ರಕರಣವನ್ನು ಭೇದಿಸಿರುವ ಸಿಸಿಬಿ ಪೊಲೀಸರು, ವಿಲ್ಲಾದಲ್ಲಿ ಹೂ ಕುಂಡಗಳಲ್ಲಿ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ಜಾಲವನ್ನು ಪತ್ತೆಹಚ್ಚಿ 1 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಡದಿ ಬಳಿಯ ಈಗಲ್ಟನ್ ವಿಲ್ಲಾದ ಮೇಲೆ ದಿಢೀರ್ ದಾಳಿ ನಡೆಸಿ ಹೂ ಕುಂಡಗಳಲ್ಲಿ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ಇಬ್ಬರು ಇರಾನಿ ಪ್ರಜೆಗಳು ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

- Advertisement -


ಬಂಧಿತರಿಂದ 1 ಕೋಟಿ ರೂ ಮೌಲ್ಯದ 130 ಹೈಡ್ರೋ ಗಾಂಜಾ ಗಿಡಗಳು, 12.85 ಕೆ.ಜಿ. ತೂಕದ ಹೈಡ್ರೋ ಗಾಂಜಾ, ಒಂದು ಸ್ಕೋಡಾ ಕಾರು, 4 ಮೊಬೈಲ್, ಯುವಿ ಲೈಟ್ಸ್, ಎಲ್.ಇ.ಡಿ ಲ್ಯಾಂಪ್ಸ್, ಎಲೆಕ್ಟ್ರಿಕಲ್ ವೇಯಿಂಗ್ ಮಷಿನ್ ವಶಕ್ಕೆ ಪಡೆದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.


ಆರೋಪಿ ಜಾವೇದ್ ಬಿಡದಿ ಬಳಿಯ ಈಗಲ್ ಟನ್ ರೆಸಾರ್ಟ್ ವಿಲ್ಲಾವನ್ನು ಯಾರ ಗಮನಕ್ಕೂ ಬಾರದಂತೆ ಹೈಡ್ರೋ ಗಾಂಜಾ ಬೆಳೆಯಲು 36 ಸಾವಿರಕ್ಕೆ ವಬಾಡಿಗೆಗೆ ಪಡೆದಿದ್ದ. ಕಳೆದ ಒಂದೂವರೆ ವರ್ಷದಿಂದ ವಿಲ್ಲಾದ ರೂಮ್, ಟೆರೆಸ್ ನಲ್ಲಿ ಗಾಂಜಾ ಗಿಡ ಬೆಳಿತಿದ್ದ. ಯುರೋಪ್ ನಿಂದ ಹೈಬ್ರೀಡ್ ಗಾಂಜಾ ಬೀಜಗಳನ್ನು ತರಿಸಿಕೊಂಡು ಬಳಿಕ ವ್ಯವಸ್ಥಿತವಾಗಿ ಗಾಂಜಾ ಬೀಜಗಳನ್ನು ಪ್ಲಾಂಟ್ ಮಾಡಿ ಬೆಳೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -


ವಿದ್ಯಾರ್ಥಿ ವೀಸಾದಲ್ಲಿ ನಗರಕ್ಕೆ ಬಂದಿದ್ದ ಜಾವೇದ್ ಹೆಚ್ಚಿನ ಹಣಗಳಿಸಲು ಡ್ರಗ್ಸ್ ದಂಧೆಗೆ ಇಳಿದಿದ್ದ ವೀಸಾ ಅವಧಿ ಮುಗಿದರೂ ಇಲ್ಲೇ ಅಕ್ರಮವಾಗಿ ಉಳಿದುಕೊಂಡು ವೆಬ್ ಸೈಟ್ ಮೂಲಕ ಹೈಡ್ರೋ ಗಾಂಜಾ ಗಿಡ ಬೆಳೆಯುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ.
ಬಂಧಿತ ಜಾವೀದ್ ವಿರುದ್ಧ ಹಿಂದೆ ಯಶವಂತಪುರ ಠಾಣೆಯಲ್ಲಿ ಎರಡು ಡ್ರಗ್ಸ್ ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು ಬಂಧಿತ ನಾಲ್ವರ ವಿರುದ್ಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.



Join Whatsapp