ಭಾರತ – ಪಾಕಿಸ್ತಾನ ನಡುವೆ ಶಾಂತಿ ಮಾತುಕತೆ । ಆಂಟೋನಿಯೊ ಗುಟೆರೆಸ್ ಭರವಸೆ

Prasthutha|

ಜಿನೋವಾ: ಕಳೆದ ವಾರದ ನಡೆದ ಉನ್ನತ ಮಟ್ಟದ ಸಾಮಾನ್ಯ ಅಧಿವೇಶನದಲ್ಲಿ ಭಾರತ ಮತ್ತು ಪಾಕಿಸ್ತಾನದ ತೀವ್ರ ರೀತಿಯ ವಾಗ್ದಾಳಿ ಮತ್ತು ಕಟು ಶಬ್ದಗಳ ಹೇಳಿಕೆ ವಿನಿಮಯದ ಹೊರತಾಗಿಯೂ, ಉಭಯ ರಾಷ್ಟ್ರ ನಡುವೆ ಶೀಘ್ರದಲ್ಲೇ ಶಾಂತಿ ಮಾತುಕತೆ ನಡೆಯುವ ಭರವಸೆಯಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ತಿಳಿಸಿದ್ದಾರೆ.

- Advertisement -

ಉಭಯ ರಾಷ್ಟ್ರದ ಪ್ರತಿನಿಧಿಗಳು ಪರಸ್ಪರ ಕಟುವಾದ ಶಬ್ದಗಳಿಂದ ಹೇಳಿಕೆಗಳನ್ನು ವಿನಿಮಯ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಇದರ ಹೊರತಾಗಿಯೂ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಅವರು ತಿಳಿಸಿದರು.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಬಿಜೆಪಿ ಮತ್ತು ಆರೆಸ್ಸೆಸ್ ಅನ್ನು ಗುರಿಯಾಗಿಸಿ ಭಾರತದ ವಿರುದ್ಧ ವಾಗ್ದಾಳಿ ನಡೆಸಿದ ಕುರಿತು ಗುಟೆರೆಸ್ ಈ ಮೇಲಿನಂತೆ ಪ್ರತಿಕ್ರಿಯಿಸಿದರು. ಈ ಹಿಂದೆ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮ ಸಮಯದಲ್ಲಿ ಮತ್ತು ಅದಕ್ಕೂ ಮುನ್ನ ಪಾಕಿಸ್ತಾನ ನಡೆಸಿದ ನರಮೇಧದಲ್ಲಿ ಕನಿಷ್ಠ 3,00, 000 ಮಂದಿ ಬಲಿಯಾಗಿದ್ದನು ಅವರು ಈ ಸಂದರ್ಭದಲ್ಲಿ ನೆನೆಸಿದರು.

Join Whatsapp