ಅಚ್ಚರಿ ಹುಟ್ಟಿಸುತ್ತಿದೆ ಸಿವಿಲ್ ಸರ್ವಿಸ್ ಪರೀಕ್ಷೆ ಪಾಸಾದವರಲ್ಲಿ ಆರೆಸ್ಸೆಸ್ ಪರ ಸಂಸ್ಥೆಗಳಲ್ಲಿ ತರಬೇತಿ ಪಡೆದವರ ಸಂಖ್ಯೆ !!

Prasthutha|

► ವಾಸ್ತವಗಳನ್ನು ಮುಚ್ಚಿಟ್ಟು ಸುಳ್ಳು ಹರಡಿದ ಸಂಘಿ ಮಾಧ್ಯಮಗಳು

- Advertisement -

ಈ ಬಾರಿಯ ಸಿವಿಲ್ ಸರ್ವಿಸ್ ಪಡೆದವರಲ್ಲಿ ಹೆಚ್ಚಿನವರು ಆರೆಸ್ಸೆಸ್ ಬೆಂಬಲಿತ ಸಂಕಲ್ಪ್ ಫೌಂಡೇಶನ್ ನಲ್ಲಿ ತರಬೇತಿ ಪಡೆದವರಾಗಿದ್ದಾರೆ. ನಾಗರಿಕ ಸೇವೆಯ 60% ಕ್ಕಿಂತ ಹೆಚ್ಚಿನವರು ಸಂಕಲ್ಪ್ ಫೌಂಡೇಶನ್ ನಿಂದ ಬಂದವರಾಗಿದ್ದಾರೆ. 14% ಜನಸಂಖ್ಯೆಯಿರುವ ಮುಸ್ಲಿಮರಲ್ಲಿ ಕೇವಲ 5% ಜನರಿಗೆ ಮಾತ್ರ ಪ್ರವೇಶಿಸಲು ಸಾಧ್ಯವಾಗಿದೆ. ದೇಶದಲ್ಲಿ ‘UPSC ಜಿಹಾದ್’ ನಡೆಯುತ್ತಿದೆ ಎಂದು ಸಂಘಪರಿವಾರದ ಪರ ಮಾಧ್ಯಮಗಳು ಪ್ರಚಾರ ಮಾಡುತ್ತಿರುವ ಸಮಯದಲ್ಲೇ ಈ ಆಘಾತಕಾರಿ ಅಂಕಿ ಅಂಶಗಳು ಬಹಿರಂಗಗೊಂಡಿದೆ. ದೇಶದಲ್ಲಿ ಯುಪಿಎಸ್ಸಿ ಜಿಹಾದ್ ನಡೆಯುತ್ತಿದೆ ಎಂದು ಪ್ರಚಾರಪಡಿಸಿದ ಸಂಘಪರಿವಾರದ ಪರ ಮಾಧ್ಯಮ ಸುದರ್ಶನ್ ಟಿವಿಯ ವಿರುದ್ಧದ ದೂರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಏತನ್ಮಧ್ಯೆ ನಾಗರಿಕ ಸೇವಾ ಪ್ರವೇಶದ ಆಘಾತಕಾರಿ ಸಂಖ್ಯೆ ಹೊರಬರುತ್ತಿದೆ.

ಪ್ರವೇಶ ಪಡೆದವರಲ್ಲಿ ಮುಸ್ಲಿಂ ಪ್ರಾತಿನಿಧ್ಯ ಬಹಳ ಕಡಿಮೆ. ಅದೇ ಸಮಯದಲ್ಲಿ ಬಹುಪಾಲು ಜನರು ಸಂಘಪರಿವಾರ ಪರ ಸಂಸ್ಥೆಗಳಲ್ಲಿ ತರಬೇತಿ ಪಡೆದವರಾಗಿದ್ದಾರೆ. 14.2% ಜನಸಂಖ್ಯೆಯನ್ನು ಹೊಂದಿರುವ ದೇಶದ ಪ್ರಮುಖ ಅಲ್ಪಸಂಖ್ಯಾತರಾದ ಮುಸ್ಲಿಮರು ಈಗ ಕೇವಲ 5% ರಷ್ಟು ಮಾತ್ರ ಪ್ರತಿನಿಧಿಸುತ್ತಿದ್ದಾರೆ. ಪ್ರವೇಶ ಪಡೆದ 828 ಜನರಲ್ಲಿ ಕೇವಲ 42 ಮಂದಿ ಮುಸ್ಲಿಮರು. ಈ ಪೈಕಿ 476 (61%) ಜನರು ಆರೆಸ್ಸೆಸ್ ಬೆಂಬಲಿತ ಸಂಕಲ್ಪ್ ಫೌಂಡೇಶನ್ ನಲ್ಲಿ ತರಬೇತಿ ಪಡೆದವರಾಗಿದ್ದಾರೆ. 2018ರಲ್ಲಿ 57%, 2017ರಲ್ಲಿ 62%, 2016ರಲ್ಲಿ 60% ಮಂದಿ ಇಲ್ಲಿಂದ ಪ್ರವೇಶ ಪಡೆದಿದ್ದಾರೆ.

- Advertisement -

ಈ ಬಾರಿ ನಾಗರಿಕ ಸೇವೆಯನ್ನು ಪಡೆದ ಸಂಸ್ಥೆಯ ವಿಧ್ಯಾರ್ಥಿಗಳನ್ನು ಗೌರವಿಸುವ ಸಲುವಾಗಿ ಫೌಂಡೇಶನ್ ನಾಳೆ ಸನ್ಮಾನ ಸಮಾರಂಭವನ್ನು ನಡೆಸಲಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ದರ್ಮೇಂದ್ರ ಪ್ರಧಾನ್, ನಾಗಲ್ಯಾಂಡ್ ರಾಜ್ಯಪಾಲ ಎನ್.ರವಿ ಕಾರ್ಯಕ್ರಮದ ಮುಖ್ಯ ಅತಿಥಿಗಳು. ಕೇಂದ್ರ ಗೃಹ ಸಚಿವ ಅಮಿತ್ ಶಾ ರಿಂದ ಹಿಡಿದು ಶಿಕ್ಷಣ ಸಚಿವ ಪೋಕ್ರಿಯಾಲ್ ವರೆಗೆ ಫೌಂಡೇಶನ್ ಗೆ ಭೇಟಿ ನೀಡುತ್ತಿದ್ದಾರೆ. ಈ ವಾಸ್ತವವನ್ನು ಮುಚ್ಚಿಡುತ್ತಾ ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾಲಯ ಮತ್ತು ಝಕಾತ್ ಫೌಂಡೇಶನ್ ನ ನಾಗರಿಕ ಸೇವಾ ತರಬೇತಿ ಕೇಂದ್ರಗಳ ಮೂಲಕ ಮುಸ್ಲಿಮರು ನುಸುಳುತ್ತಿದ್ದಾರೆ ಎಂಬ ಸುಳ್ಳು ಪ್ರಚಾರವನ್ನು ಸಂಘಪರಿವಾರ ಮಾಧ್ಯಮಗಳು ಹರಡುತ್ತಿದೆ.



Join Whatsapp