RSS ನಾಗ್ಪುರ ಕಚೇರಿಯ 9 ಮಂದಿಗೆ ಕೊರೋನಾ ಪಾಸಿಟಿವ್ । ಆಸ್ಪತ್ರೆಗೆ ದಾಖಲು

► ನಾಗ್ಪುರ ‘ರಕ್ಷಕ’ ಸಚಿವರಿಗೂ ಪಾಸಿಟಿವ್ ದೃಢ !

►►ನಾಗ್ಪುರ ಈಗ ಕೊರೋನಾ ಹಾಟ್ ಸ್ಪಾಟ್ !!

- Advertisement -

ಕೊರೋನಾಕ್ಕೆ ಯಾವುದೇ ಧರ್ಮವಿಲ್ಲ, ಅದೊಂದು ಭಯಂಕರ ಸಾಂಕ್ರಾಮಿಕ ರೋಗವಷ್ಟೇ.  ನಾಗ್ಪುರದ ಆರೆಸ್ಸೆಸ್ ಕೇಂದ್ರ ಕಚೇರಿಯ 9 ಮಂದಿ ಹಿರಿಯ ನಾಯಕರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಚೇರಿಯನ್ನು ಇದೀಗಾಗಲೇ ಸ್ಯಾನಿಟೈಝ್ ಮಾಡಲಾಗಿದ್ದರೂ ಸೋಂಕಿತರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಇನಷ್ಟು ಮಂದಿಗೆ ಇದು ಹರಡುವ ಸಾಧ್ಯತೆ ಇದೆ ಎನ್ನಲಾಗಿದೆ.  

ಸೋಂಕಿತರಲ್ಲಿ ಹೆಚ್ಚಿನವರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರ ನಡುವೆ ನಾಗ್ಪುರ ಜಿಲ್ಲೆಯ ‘ರಕ್ಷಕ’ ಸಚಿವರಾಗಿರುವ ನಿತಿನ್ ರಾವತ್ ಅವರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ನಾಗ್ಪುರ ಈಗ ಕೊರೋನಾ ಹಾಟ್ ಸ್ಪಾಟ್ !

ನಾಗ್ಪುರ ಜಿಲ್ಲೆಯೀಗ ಕೊರೋನಾ ಹಾಟ್ ಸ್ಪಾಟ್ ಅಗಿ ಕಂಡುಬಂದಿದೆ.  ಆರೆಸ್ಸೆಸ್ ಕಚೇರಿಯ 9 ಮಂದಿ ಸ್ವಯಂಸೇವಕರಿಗೆ ದೃಢಪಟ್ಟಿರುವ ನಡುವೆಯೇ ನಾಗ್ಪುರದ ‘ರಕ್ಷಕ’ ಸಚಿವ ನಿತಿನ್ ರಾವತ್ ಗೂ ಕೊರೋನಾ ದೃಢಪಟ್ಟಿದೆ. ಅವರಿದನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ದೃಢಪಡಿಸಿದ್ದಾರೆ. ನಾಗ್ಪುರದ ಸಂಸದ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೂಡಾ ಸೋಂಕು ಸೃಢಪಟ್ಟಿತ್ತು. ಜಿಲ್ಲೆಯಲ್ಲಿ ಕೊರೋನಾ ನಾಗಾಲೋಟವನ್ನು ನಿಲ್ಲಿಸಲು ಜಿಲ್ಲಾಡಳಿತ ಶನಿವಾರ ಮತ್ತು ಆದಿತ್ಯವಾರ ಜನತಾ ಕರ್ಫ್ಯೂವನ್ನು ಹೇರಲಾಗಿತ್ತು. ಅದನ್ನು ಸೆಪ್ಟಂಬರ್ 30ರ ನಂತರವೂ ಮುಂದುವರೆಸುವ ಕುರಿತು ಮೇಯರ್ ಸಂದೀಪ್ ಜೋಶಿ ಹೇಳಿಕೆ ನೀಡಿದ್ದಾರೆ.

- Advertisement -