ಆರ್ ಎಸ್ ಎಸ್ ನೂತನ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಆಯ್ಕೆ

Prasthutha|

ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್ )ದ ಅಖಿಲ ಭಾರತೀಯ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಅವರು ಇಂದು ಆಯ್ಕೆಯಾಗಿದ್ದಾರೆ. 2009ರಿಂದ ದಾಖಲೆಯ 12 ವರ್ಷಗಳಿಂದ ಸರಕಾರ್ಯವಾಹರಾಗಿದ್ದ ಸುರೇಶ್ ‘ಭಯ್ಯಾಜಿ’ ಜೋಶಿ ಅವರ ಸ್ಥಾನಕ್ಕೆ ಕರ್ನಾಟಕದವರಾದ ದತ್ತಾತ್ರೇಯ ಹೊಸಬಾಳೆ ಆಯ್ಕೆಯಾಗಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಆರೆಸ್ಸೆಸ್‌ನ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಅರೆಸ್ಸೆಸ್‌ನ ಪ್ರಧಾನ ಕಾರ್ಯದರ್ಶಿಯ ಆಯ್ಕೆ ನಡೆಯುತ್ತದೆ. ಸತತ ನಾಲ್ಕನೇ ಬಾರಿಗೆ 2018ರಲ್ಲಿ ಆಯ್ಕೆಯಾಗಿದ್ದ ಸುರೇಶ್ ಭಯ್ಯಾಜಿ ಜೋಶಿ ಅವರ ಅವಧಿ ಈ ವರ್ಷ ಅಂತ್ಯಗೊಂಡಿದೆ.

- Advertisement -

ಪ್ರತಿ ಬಾರಿಯೂ ಆರೆಸ್ಸೆಸ್‌ನ ವಾರ್ಷಿಕ ಸಭೆ ಕೇಂದ್ರ ಕಚೇರಿ ನಾಗಪುರದಲ್ಲಿ ನಡೆಯುತ್ತಿತ್ತು. ಆದರೆ ಈ ಬಾರಿ ಮಹಾರಾಷ್ಟ್ರದಲ್ಲಿ ಕೊರೋನಾದ ಸಂಖ್ಯೆ ಹೆಚ್ಚಾದ ಕಾರಣ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.
ಮಾರ್ಗದರ್ಶಕರಾಗಿ ಸಂಘದ ದೈನಂದಿನ ಚಟುವಟಿಕೆಗಳನ್ನು ನಿರ್ವಹಣೆ ಮಾಡುವ ಸರಕಾರ್ಯನಿರ್ವಾಹ ಹುದ್ದೆಯು ಆರೆಸ್ಸೆಸ್‌ನ ಉನ್ನತ ಹುದ್ದೆಯಾಗಿದೆ. ಈ ಹಿಂದೆ ಕರ್ನಾಟಕದ ಹೋ.ವೇ. ಶೇಷಾದ್ರಿ ಅವರು ಸರಕಾರ್ಯವಾಹ ಹುದ್ದೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.]

ದತ್ತಾತ್ರೇಯ ಹೊಸಬಾಳೆ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹೊಸಬಾಳೆ ಗ್ರಾಮದವರಾಗಿದ್ದಾರೆ. ಆರೆಸ್ಸೆಸ್ ಹಿನ್ನೆಲೆಯಿಂದ ಬಂದ ಅವರು, 1968ರಲ್ಲಿ ಸಂಘ ಸೇರ್ಪಡೆಯಾಗಿದ್ದರು. 15 ವರ್ಷ ಎಬಿವಿಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇದುವರೆಗೂ ಅವರು ಆರೆಸ್ಸೆಸ್‌ನ ಸಹ ಸರಕಾರ್ಯವಾಹರಾಗಿದ್ದರು.

- Advertisement -