ಸಂಬಳ ದೊರಕದೆ ಸೌದಿಯಲ್ಲಿ ಸಿಲುಕಿಕೊಂಡಿರುವ ದಾವಣಗೆರೆ ಮಹಿಳೆ

Prasthutha|


ದಾವಣಗೆರೆ : ದಾವಣಗೆರೆ ಜಿಲ್ಲೆಯ ಆಜಾದ್ ನಗರದ ಮಹಿಳೆಯೊಬ್ಬರು ಏಜೆಂಟ್ ಮೂಲಕ ಸೌದಿ ಅರೇಬಿಯಾಗೆ ಕೆಲಸಕ್ಕೆಂದು ತೆರಳಿ ಸಂಬಳ ದೊರಕದೆ ಸಿಲುಕಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಆಝಾದ್ ನಗರದ ಮಕ್ಬುಲ್ ಸಾಬ್ ಎಂಬವರ ಮಗಳು ಫೈರೋಝಾ ಎಂಬ ಮಹಿಳೆ ಏಜೆಂಟ್ ಮೂಲಕ ಸೌದಿ ಅರೇಬಿಯಾಗೆ ಕೆಲಸಕ್ಕೆಂದು ತೆರಳಿದ್ದು, ಅಲ್ಲಿ ಮನೆಗೆಲಸ ಮಾಡಿಕೊಂಡು ಸಂಬಳ ದೊರಕದೆ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

- Advertisement -

ಫೈರೋಝಾಗೆ ಇಬ್ಬರು ಗಂಡು ಮತ್ತು ಒಂದು ಹೆಣ್ಣು ಮಗುವಿದೆ. ಅಕ್ಕನನ್ನು ಸೌದಿಯಿಂದ ಕರೆ ತರಬೇಕೆಂದು ಫೈರೋಝಾಳ ತಂಗಿ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಬೇಡುತ್ತಿದ್ದಾರೆ. ಈ ಕುರಿತು ಸಂಸದರಿಗೆ ಮತ್ತು ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದ್ದಾರೆ ಎನ್ನಲಾಗಿದೆ.

- Advertisement -