‘ಸಂತುಷ್ಟ’ ದೇಶಗಳ ಪಟ್ಟಿಯಲ್ಲಿ ಭಾರತದ ಸ್ಥಾನವೆಷ್ಟು ಗೊತ್ತೇ?

Prasthutha|

ವಿಶ್ವದ ‘ಸಂತುಷ್ಟ’ ದೇಶಗಳ ವರದಿ 2021ನ್ನು ಯುಎನ್ ಸಸ್ಟೈನಬಲ್ ಡೆವಲಪ್ಮೆಂಟ್ ಸೊಲ್ಯೂಷನ್ ನೆಟ್ವರ್ಕ್ ಬಿಡುಗಡೆ ಮಾಡಿದೆ. 149 ದೇಶಗಳ ಈ ಪಟ್ಟಿಯಲ್ಲಿ ಭಾರತವು 139ನೇ ಸ್ಥಾನದಲ್ಲಿದೆ. 2019 ರಲ್ಲಿ ಭಾರತವು 140 ನೇ ಸ್ಥಾನದಲ್ಲಿತ್ತು.

- Advertisement -

ವಿಶ್ವದ ಅತ್ಯಂತ ‘ಸಂತುಷ್ಟ’ ದೇಶವೆಂಬ ಕೀರ್ತಿಗೆ ಫಿನ್ಲ್ಯಾಂಡ್ ಪಾತ್ರವಾಗಿದೆ. ಫಿನ್ಲೆಂಡ್ ಸತತ ನಾಲ್ಕನೇ ವರ್ಷವೂ ವಿಶ್ವದ ಅತ್ಯಂತ ‘ಸಂತುಷ್ಟ’ ದೇಶವಾಗಿ ಉಳಿದುಕೊಂಡಿದೆ. ಐಸ್ಲ್ಯಾಂಡ್, ಡೆನ್ಮಾರ್ಕ್, ಸ್ವಿಟ್ಜರ್ಲೆಂಡ್, ನೆದರ್ಲ್ಯಾಂಡ್, ಸ್ವೀಡನ್, ಜರ್ಮನಿ ಮತ್ತು ನಾರ್ವೆ ನಂತರದ ಸ್ಥಾನದಲ್ಲಿವೆ. ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರ ಅಮೆರಿಕಾ ಈ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿದೆ.

ಇದು ನಾಗರಿಕರ ಸಂತೋಷಕ್ಕೆ ಅನುಗುಣವಾಗಿ ಸಿದ್ಧಪಡಿಸಿದ ವರದಿಯಾಗಿದ್ದು, ಇದೊಂದು ಐತಿಹಾಸಿಕ ಸಮೀಕ್ಷೆಯಾಗಿದೆ. ಈ ವರದಿಯು ಜಿಡಿಪಿ, ಆರೋಗ್ಯಕರ ಜೀವನ ಮತ್ತು ನಾಗರಿಕರ ಅಭಿಪ್ರಾಯಗಳ ಆಧಾರದದಲ್ಲಿ ಬಿಡುಗಡೆಯಾಗಿದೆ.

Join Whatsapp