ಇನ್ಫೋಸಿಸ್ ವಿರುದ್ಧ ‘ದೇಶದ್ರೋಹ’ದ ಆರೋಪ | ತನ್ನದೇ ಮುಖವಾಣಿ ಪತ್ರಿಕೆಯ ಸುದ್ದಿಯಿಂದ ಅಂತರ ಕಾಯ್ದುಕೊಂಡ RSS!

Prasthutha|

ದೆಹಲಿ: ದೇಶದ ಅತ್ಯುನ್ನತ ಸಂಸ್ಥೆ ಇನ್ಫೋಸಿಸ್ ವಿರುದ್ಧ RSS ಮುಖವಾಣಿ ‘ಪಾಂಚಜನ್ಯ’ ನಡೆಸಿದ್ದ ದೇಶದ್ರೋಹದ ಸಂಚು ಆರೋಪದ ಕುರಿತು ಸಂಘ ಪರಿವಾರ ಇದೀಗ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದೆ.

- Advertisement -

ದೇಶದ ನೂತನ ತೆರಿಗೆ ಸಂಬಂಧಿತ ವೆಬ್ ಪೋರ್ಟಲ್ ನಲ್ಲಿ ಆಗುತ್ತಿದ್ದ ತೊಂದರೆಗಳನ್ನ ಮುಂದಿಟ್ಟುಕೊಂಡು ಸಂಘ ಪರಿವಾರದ ಮುಖವಾಣಿ ‘ಪಾಂಚಜನ್ಯ’ವು ಕಿಡಿ ಕಾರಿತ್ತು. ಅಲ್ಲದೇ, ದೇಶದ ಆರ್ಥಿಕ ಸ್ಥಿತಿ ಹಾಳುಗೆಡವಲು ಇನ್ಫೋಸಿಸ್ ಆಡಳಿತವು ಯತ್ನಿಸುತ್ತಿರುವುದಾಗಿ ಆರೋಪಿಸಿತ್ತು.

ಇದೀಗ ‘ಪಾಂಚಜನ್ಯ’ದಲ್ಲಿ ಪ್ರಕಟಗೊಂಡ ಸುದ್ದಿಯಿಂದ ಸಂಘ ಪರಿವಾರ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ RSS ವಕ್ತಾರ ಸುನಿಲ್ ಅಂಬೇಡ್ಕರ್, “ಇದು ಸಂಘದ ಅಭಿಪ್ರಾಯವಲ್ಲ, ಕೇವಲ ಲೇಖಕರದ್ದಷ್ಟೇ..” ಎಂದಿದ್ದಾರೆ.

- Advertisement -

“ಭಾರತದ ಕಂಪೆನಿಯಾಗಿ ಇನ್ಫೋಸಿಸ್ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆಯನ್ನ ನೀಡಿದೆ. ಆದರೆ ವೆಬ್ ಪೋರ್ಟಲ್ ನಲ್ಲಾದ ತೊಂದರೆ ಸಂಬಂಧಿಸಿ ‘ಪಾಂಚಜನ್ಯ’ದಲ್ಲಿ ಪ್ರಕಟವಾದ ವಿಚಾರವು ಲೇಖಕರ ಅಭಿಪ್ರಾಯವಾಗಿದೆಯೇ ಹೊರತು ಸಂಘದ್ದಲ್ಲ..” ಎಂದು ಸುನಿಲ್ ಟ್ವೀಟಿಸಿದ್ದಾರೆ.  

ಈಗಾಗಲೆ ಇನ್ಫೋಸಿಸ್ ಸಂಸ್ಥೆಗೆ ಗುತ್ತಿಗೆ ನೀಡಲಾದ ವೆಬ್ ಪೋರ್ಟಲ್ ನಿರ್ವಹಣೆ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಕೂಡಾ ಅಸಮಾಧಾನ ಗೊಂಡಿದ್ದಾರೆ. ಈ ಮಧ್ಯೆ, RSS ಮುಖವಾಣಿ ‘ಪಾಂಚಜನ್ಯ’ ಇನ್ಫೋಸಿಸ್ ಸಂಸ್ಥೆ ಮೇಲೆ ‘ದೇಶ ದ್ರೋಹ’ದ ಆರೋಪ ಹೊರಿಸಿತ್ತು. ಅಲ್ಲದೇ, ಎಡಪಂಥೀಯ ಸಂಘಟನೆ ಹಾಗೂ ಎಡಪಂಥೀಯ ಸುದ್ದಿ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಾಗಿಯೂ ಸಂಘ ಪರಿವಾರದ ಮುಖವಾಣಿ ದೂಷಿಸಿತ್ತು.

Join Whatsapp