ಮುಂದಿನ ಯು.ಪಿ.ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಚಾರ: ಮುಜಫ್ಫರನಗರ ರೈತ ಮಹಾಪಂಚಾಯತ್ ತೀರ್ಮಾನ

Prasthutha|

ಮುಜಫ್ಫರನಗರ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಚಾರ ನಡೆಸಲಾಗುವುದು ಎಂದು ರೈತ ಮಹಾಪಂಚಾಯತ್ ಘೋಷಿಸಿದೆ.

- Advertisement -


ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಉತ್ತರ ಪ್ರದೇಶದ ಮುಝಫ್ಫರನಗರದಲ್ಲಿ ಭಾನುವಾರ ಹಮ್ಮಿಕೊಂಡಿರುವ ಕಿಸಾನ್ ಮಹಾಪಂಚಾಯತ್ ನಲ್ಲಿ ಲಕ್ಷಾಂತರ ರೈತರು ಪಾಲ್ಗೊಂಡು ಕೃಷಿ ಕಾನೂನುಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ ಪ್ರತಿಯೊಬ್ಬ ರೈತ ಮುಖಂಡರು ಕೂಡ ತಮ್ಮ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಶಕ್ತಿ ಏನೆಂದು ತೋರಿಸುತ್ತೇವೆ ಎಂದು ಬಹಿರಂಗ ಸವಾಲು ಹಾಕಿದರು.
ಅವರು (ಕೇಂದ್ರದವರು) ಬೆರಳೆಣಿಕೆಯಷ್ಟು ರೈತರು ಮಾತ್ರ ಪ್ರತಿಭಟಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ನೋಡಿ ಇಲ್ಲಿ ಎಷ್ಟು ಜನ ಪ್ರತಿಭಟಿಸುತ್ತಿದ್ದಾರೆ, ಇಲ್ಲಿ ನಾವು ಧ್ವನಿ ಎತ್ತಿದರೆ ಸಂಸತ್ ನ ಒಳಗೆ ಕೂತವರಿಗೂ ಕೇಳಿಸಬೇಕು ಎಂದು ಹೇಳಿದರು.

- Advertisement -


ಸರ್ಕಾರ ಸಮಸ್ಯೆ ಅರ್ಥಮಾಡಿಕೊಂಡರೆ ಒಳ್ಳೆಯದು. ಇಂತಹ ಸಭೆಗಳನ್ನು ದೇಶಾದ್ಯಂತ ನಡೆಸಲಾಗುವುದು. ನಾವು ದೇಶವನ್ನು ಮಾರಾಟ ಮಾಡದಂತೆ ಉಳಿಸಬೇಕಾಗಿದೆ, ರೈತರು, ಕಾರ್ಮಿಕರು ಮತ್ತು ಯುವಕರು ಬದುಕಲು ಅವಕಾಶ ನೀಡಬೇಕು ಎಂದು ಮಹೇಂದ್ರ ಸಿಂಗ್ ಟೀಕಾಯತ್ ಅವರ ಮಗ ರಾಕೇಶ್ ಟೀಕಾಯತ್ ರೈತರನ್ನು ಉದ್ದೇಶಿಸಿ ಹೇಳಿದರು.


ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ನಡೆಯುತ್ತಿರುವ ಈ ಪಂಚಾಯತ್ ಗೆ ರೈತರ 300ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್, ಮಹಾರಾಷ್ಟ್ರ, ಕರ್ನಾಟಕ, ಸೇರಿದಂತೆ ಹಲವು ರಾಜ್ಯಗಳ ರೈತರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.

Join Whatsapp