ATMಗೆ ನುಗ್ಗಿ 6.50 ಲಕ್ಷ ರೂ. ದೋಚಿದ ಖದೀಮರು

Prasthutha|

ಬೀದರ್: ATMಗೆ ಖದೀಮರು ಕನ್ನ ಹಾಕಿ 6.50 ಲಕ್ಷ ರೂ. ದೋಚಿದ ಘಟನೆ 6.50 ಲಕ್ಷ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಹರ್ಷಾ ಕಾಂಪ್ಲೆಕ್ಸ್ ಬಳಿ ನಡೆದಿದೆ.

- Advertisement -

ಎಟಿಎಂ ಮಶೀನ್ ಮುರಿದು 6.50 ಲಕ್ಷ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಖದೀಮರ ಕೈ ಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇಂದು ಬೆಳಗಿನ ಜಾವ ಕರ್ನಾಟಕ ಬ್ಯಾಂಕ್ ನ ATMಗೆ ನುಗ್ಗಿದ ಖದೀಮರು ಗ್ಯಾಸ್ ಕಟರ್ ಬಳಸಿ ATM ಮುರಿದು ಕಳ್ಳತನ ಮಾಡಿದ್ದಾರೆ. 10 ನಿಮಿಷದಲ್ಲಿ ATM ನಲ್ಲಿದ್ದ ಹಣ ಕದ್ದು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp