ಪರಿಮಳಕ್ಕೆ ಮಾತ್ರವಲ್ಲ ಕರಿಬೇವು, ಇದರ ಆರೋಗ್ಯ ಪ್ರಯೋಜನಗಳೂ ಹಲವು!

Prasthutha|

ಕರಿಬೇವಿನ ಎಲೆಗಳು ಔಷಧೀಯ ಮೌಲ್ಯ ಮತ್ತು ವಿಶೇಷ ಪರಿಮಳಕ್ಕೆ ಹೆಸರುವಾಸಿಯಾಗಿದೆ.

- Advertisement -

ಸುವಾಸನೆಯುಕ್ತವಾಗಿರುವ ಈ ಎಲೆಗಳು ಭಾರತದ ಅಡುಗೆಯಲ್ಲಿ ಬಹಳ ಹೆಚ್ಚಾಗಿ ಬಳಸುತ್ತಾರೆ. ಅಡುಗೆಯ ಜೊತೆಗೆ ಇವುಗಳಲ್ಲಿ ಸಾಕಷ್ಟು ಔಷಧೀಯ ಗುಣಗಳು ಇದೆ ಎಂಬುದೂ ನಿಮಗೆ ತಿಳಿದಿರಲಿ. ಪ್ರೋಟಿನ್ ಕಾರ್ಬೋಹೈಡ್ರೈಟ್ ಕ್ಯಾಲ್ಸಿಯಂ ಕಬ್ಬಿಣ ಬೀಟಾ ಕ್ಯಾರೋಟಿನ್ ಮುಂತಾದ ಉಪಯುಕ್ತ ಪೋಷಕಾಂಶಗಳನ್ನು ಇದು ಹೊಂದಿದೆ.

ಆಹಾರಕ್ಕೆ ರುಚಿಯನ್ನು ಕೊಡುವುದರ ಜೊತೆಗೆ ಆರೋಗ್ಯಕ್ಕೂ ಉತ್ತಮ ಎಂದು ಸಾಬೀತಾಗಿರುವ ಈ ಕರಿಬೇವಿನ ಆರೋಗ್ಯ ಪ್ರಯೋಜನಗಳು ಹೀಗಿವೆ:

- Advertisement -
  1. ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ
  2. ಮಾರ್ನಿಂಗ್ ಸಿಕ್ಕ ನೆಸ್ ಕಡಿಮೆ ಮಾಡುತ್ತದೆ
  3. ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ
  4. ಮಧುಮೇಹಕ್ಕೆ ಉತ್ತಮ
  5. ಕೂದಲಿನ ಆರೋಗ್ಯವನ್ನು ವೃದ್ಧಿಸುತ್ತದೆ
  6. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ
  7. ಕ್ಯಾಲ್ಸಿಯಂ ಕೊರತೆ ನಿವಾರಿಸುತ್ತದೆ
  8. ತೂಕನಷ್ಟಕ್ಕೆ ಸಹಕಾರಿಯಾಗಿದೆ

ಇವಿಷ್ಟೇ ಅಲ್ಲ, ಇನ್ನೂ ಅನೇಕ ಪ್ರಯೋಜನಗಳು ಇವೆ. ಇದನ್ನು ನಿತ್ಯ ಅಡುಗೆಯಲ್ಲಿ ಬಳಸಲು ಇದರ ಪರಿಮಳ ಮತ್ತು ನಾವು ತಿಳಿಸಿದ ಇಷ್ಟು ಪ್ರಯೋಜನಗಳು ಸಾಕಲ್ವಾ?

Join Whatsapp