ʼಸುದ್ದಿಯಲ್ಲಿ ನಂಬಿಕೆʼ ಸಮೀಕ್ಷೆಯಲ್ಲಿ 46 ದೇಶಗಳಲ್ಲಿ ಭಾರತಕ್ಕೆ 31ನೇ ಸ್ಥಾನ!

Prasthutha|

ನವದೆಹಲಿ : ರಾಯ್ಟರ್ಸ್‌ ಸಂಸ್ಥೆ 46 ದೇಶಗಳಲ್ಲಿ ನಡೆಸಿದ ಸಮೀಕ್ಷೆಯೊಂದರಲ್ಲಿ ʼಸುದ್ದಿಯಲ್ಲಿ ನಂಬಿಕೆʼ ಸೂಚ್ಯಂಕದಲ್ಲಿ ಭಾರತ 31ನೇ ಸ್ಥಾನ ಪಡೆದಿದೆ. ರಾಯ್ಟರ್ಸ್‌ ಸಂಸ್ಥೆಯ ಡಿಜಿಟಲ್‌ ಸುದ್ದಿ ವರದಿಗಾರಿಕೆ 2021ರ ಪತ್ರಿಕೋದ್ಯಮದ ಅಧ್ಯಯನ 10ನೇ ಆವೃತ್ತಿಯ ಈ ಸಮೀಕ್ಷೆ ವರದಿಯನ್ನು ಬುಧವಾರ ಪ್ರಕಟಿಸಲಾಗಿದೆ.

- Advertisement -

ಭಾರತೀಯ ಮಾರುಕಟ್ಟೆ ಸಮೀಕ್ಷೆಗೆ ಏಷ್ಯನ್‌ ಕಾಲೇಜ್‌ ಆಫ್‌ ಜರ್ನಲಿಸಂ ಸಂಸ್ಥೆ ಬೆಂಬಲಿಸಿತ್ತು. ಈ ವರದಿಯಲ್ಲಿ ಭಾರತ ಇದೇ ಮೊದಲ ಬಾರಿ ಸ್ಥಾನ ಪಡೆದುಕೊಂಡಿದೆ.

ಭಾರತದಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ, ದೇಶದಲ್ಲಿ ಶೇ.73ರಷ್ಟು ಮಂದಿ ಸುದ್ದಿಗಳನ್ನು ಪಡೆಯಲು ಸ್ಮಾರ್ಟ್‌ ಫೋನ್‌ ಗಳನ್ನು ಉಪಯೋಗಿಸುತ್ತಾರೆ. ಶೇ.82 ಮಂದಿ ಸುದ್ದಿಗಳನ್ನು ಆನ್‌ ಲೈನ್‌ ಮತ್ತು ಸೋಶಿಯಲ್‌ ಮೀಡಿಯಾಗಳ ಮೂಲಕ ಪಡೆಯುತ್ತಾರೆ. ಶೇ.63 ಮಂದಿ ಕೇವಲ ವಾಟ್ಸಪ್‌ ಮತ್ತು ಯೂಟ್ಯೂಬ್‌ ನಂತಹ ಸಾಮಾಜಿಕ ಜಾಲತಾಣಗಳ ಮೂಲಕವೇ ಸುದ್ದಿ ಮಾಹಿತಿಗಳನ್ನು ಪಡೆಯುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.

- Advertisement -

ಈ ಸಮೀಕ್ಷೆ ನಗರ ಆಧಾರಿತ, ಇಂಗ್ಲಿಷ್‌ ಭಾಷೆ ಮಾತನಾಡುವ ಆನ್‌ ಲೈನ್‌ ಸುದ್ದಿ ಬಳಕೆದಾರರನ್ನು ಹೆಚ್ಚು ಅವಲಂಬಿಸಿದೆ. ಹೀಗಾಗಿ, ಇದು ಇಡೀ ದೇಶದ ಭಾವನೆ ಎಂದು ಪರಿಗಣಿಸಲು ಸಾಧ್ಯವಿಲ್ಲ.

Join Whatsapp