ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್’ರನ್ನು ಭೇಟಿಯಾದ ಯುಎಇ ಅಧ್ಯಕ್ಷರ ಧಾರ್ಮಿಕ ಸಲಹೆಗಾರ

ಕಲ್ಲಿಕೋಟೆ: ಚಿಕಿತ್ಸೆಯ ಬಳಿಕ ವಿಶ್ರಾಂತಿಯಲ್ಲಿರುವ ಭಾರತೀಯ ಮುಸ್ಲಿಂ ವಿದ್ವಾಂಸ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಯುಎಇ ಅಧ್ಯಕ್ಷರ ಧಾರ್ಮಿಕ ಸಲಹೆಗಾರ ಡಾ. ಸಯ್ಯಿದ್ ಅಲಿ ಅಬ್ದುಲ್ ರಹ್ಮಾನ್ ಅಲ್ ಹಾಶಿಮಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.


ಪ್ರವಾದಿ ಕುಟುಂಬದ ಪಂಡಿತರೂ, ಅರಬ್, ಯುರೋಪ್- ಏಷ್ಯಾ ರಾಷ್ಟ್ರಗಳ ಹಲವಾರು ಇಸ್ಲಾಮಿಕ್ ವಿಶ್ವವಿದ್ಯಾಲಯಗಳ ನಿರ್ದೇಶಕರೂ, ಸ್ಥಾಪಕ ಸದಸ್ಯರೂ ಆದ ಸಯ್ಯಿದ್ ಅಲಿ ಅಲ್ ಹಾಶಿಮಿ ಅವರು ಜಾಮಿಯಾ ಮರ್ಕಝ್ ಅನ್ನು ಜಗತ್ತಿನ ಹಲವು ವಿಶ್ವವಿದ್ಯಾಲಯಗಳೊಂದಿಗೆ ಸಂಯೋಜನೆಗೊಳಿಸುವಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ.

- Advertisement -


ಕೇರಳದ ಶೈಕ್ಷಣಿಕ ಕಾರ್ಯಾಚರಣೆಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವಲ್ಲಿ ಶೈಖ್ ಅಬೂಬಕರ್ ಅವರ ದೂರದೃಷ್ಟಿ, ಶ್ರದ್ಧೆ ಮಹತ್ವದ್ದು. ಮಾತ್ರವಲ್ಲ ಅವರ ಶೈಕ್ಷಣಿಕ ಚಳುವಳಿ ಭಾರತದಲ್ಲಿ ವಿಶೇಷ ಸಂಚಲನ ಮೂಡಿಸಿದೆ ಎಂದು ಹಾಶಿಮಿ ಹೇಳಿದರು.


ಶೈಖ್ ಅಬೂಬಕರ್ ಅವರಿಗಾಗಿ ಪ್ರಾರ್ಥಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದ ಅಲ್ ಹಾಶಿಮಿ, ಅತೀ ಶೀಘ್ರ ಆರೋಗ್ಯ ಪ್ರಾಪ್ತಿಯುಂಟಾಗಲಿ ಎಂದು ಹಾರೈಸಿದರು.

ನಾಲೆಡ್ಜ್ ಸಿಟಿಯ ಮಸ್ಜಿದುಲ್ ಆಸಾರ್ ನಲ್ಲಿ ನಾಳೆಯ ಜುಮುಅ ಖುತುಬಾದಲ್ಲಿ ಡಾ. ಸಯ್ಯಿದ್ ಅಲಿ ಅಲ್ ಹಾಶಿಮಿ ಭಾಗವಹಿಸಲಿದ್ದಾರೆ ಎಂದು ಮರ್ಕಝ್ ಮೂಲಗಳು ತಿಳಿಸಿವೆ.