ಸಲ್ಮಾನ್ ರಶ್ದಿ ಮನೆ ಮೇಲೆ ದಾಳಿ: ಸಹಾಯಕನಿಗೆ ಜೀವ ಬೆದರಿಕೆ

ಶಿಮ್ಲಾ: ಸೋಲನ್ ನ ಫಾರೆಸ್ಟ್ ರಸ್ತೆಯಲ್ಲಿರುವ ಬರಹಗಾರ ಸಲ್ಮಾನ್ ರಶ್ದಿ ಅವರ ಅನೀಸ್ ವಿಲ್ಲಾ ಎಂಬ ಹೆಸರಿನ ಬಂಗಲೆಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ.

ಸಲ್ಮಾನ್ ರಶ್ದಿ ಅವರ ಬಂಗಲೆಯನ್ನು ಧ್ವಂಸಗೊಳಿಸಿದ್ದಲ್ಲದೆ ಮನೆಯನ್ನು ನೋಡಿಕೊಳ್ಳುತ್ತಿರುವ ರಾಜೇಶ್ ತ್ರಿಪಾಠಿ ಎಂಬ ಸಹಾಯಕನಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ನವೆಂಬರ್ 23ರ ಮಧ್ಯಾಹ್ನ ಸಲ್ಮಾನ್ ರಶ್ದಿ ಅವರ ಕುಟುಂಬ ಸ್ನೇಹಿತೆ ರಾಣಿ ಶಂಕರದಾಸ್ ಮತ್ತು ಅವರ ಪುತ್ರ ಅನಿರುದ್ಧ ಶಂಕರದಾಸ್ ಅವರೊಂದಿಗೆ ಅನೀಸ್ ವಿಲ್ಲಾದಲ್ಲಿ ಇದ್ದಾಗ, ಗೋವಿಂದ್ ರಾಮ್ ಎಂಬಾತ ತನ್ನ ಮಗ ಮತ್ತು ಇತರ ಕೆಲವು ದುಷ್ಕರ್ಮಿಗಳೊಂದಿಗೆ ಬಂದು ಕಾನೂನುಬಾಹಿರವಾಗಿ ಮನೆಯನ್ನು ಧ್ವಂಸಗೊಳಿಸಿದ್ದಾರೆ. ಅವರನ್ನು ತಡೆಯಲು ಪ್ರಯತ್ನಿಸಿದಾಗ ಕೊಲೆ ಬೆದರಿಕೆಯ ಹಾಕಿದ್ದಾರೆ ಎನ್ನಲಾಗಿದೆ.

ಸೋಲನ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.