ಮಸ್ಜಿದುಲ್ ಹರಮಿನ ಸೇವೆಗಾಗಿ 80 ಮಹಿಳಾ ಪೊಲೀಸರ ನೇಮಕ

Prasthutha|

ಮಕ್ಕಾ: ಮಸ್ಜಿದುಲ್ ಹರಮ್‌ನ ಸೇವೆಗಾಗಿ ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ. ಸುಮಾರು 80 ಮಹಿಳಾ ಪೊಲೀಸರು ಹಜ್ ಮತ್ತು ಉಮ್ರಾ ಭದ್ರತಾ ಪಡೆಗಳ ಅಧೀನದಲ್ಲಿ ಪವಿತ್ರ ಹರಮ್‌ನ ದ್ವಾರಗಳಲ್ಲಿ ಮತ್ತು ಯಾತ್ರಾರ್ಥಿಗಳ ನಡುವೆ ಸೇವೆ ಸಲ್ಲಿಸಲಿದ್ದಾರೆ.

- Advertisement -

ಜನಸಂದಣಿ ನಿಯಂತ್ರಣ ಸೇರಿದಂತೆ ವಿಶೇಷ ತರಬೇತಿಯೊಂದಿಗೆ ಮಹಿಳಾ ಪೊಲೀಸರನ್ನು ಪವಿತ್ರ ಹರಮಿನ ಸೇವೆಗೆ ನೇಮಿಸಲಾಗಿದೆ. ಮಹಿಳಾ ಯಾತ್ರಾರ್ಥಿಗಳಿಗೆ ಸಹಾಯ ಮಾಡುವುದು ಅವರ ಮುಖ್ಯ ಜವಾಬ್ದಾರಿಯಾಗಿದೆ ಎಂದು ಪೊಲೀಸ್ ಅಧಿಕಾರಿ ಗೈದಾ ಬಕರ್ ಹೇಳಿದ್ದಾರೆ. ಹರಮಿನ ಎಲ್ಲಾ ಭಾಗಗಳೂ ಮಹಿಳಾ ಪೊಲೀಸರ ವೀಕ್ಷಣೆಯಲ್ಲಿರುತ್ತದೆ. ಗುಂಪಿನಿಂದ ಪ್ರತ್ಯೇಕವಾಗಿ ಒಬ್ಬಂಟಿಯಾದ ಮಹಿಳೆಯರಿಗೆ ಮಹಿಳಾ ಪೊಲೀಸರಿಂದ ಹೆಚ್ಚಿನ ಸಹಾಯವಾಗಬಹುದು ಎಂದು ಹರಮ್ ಮೂಲಗಳು ತಿಳಿಸಿದೆ.

Join Whatsapp