ಕೊರೋನಾ ಕುರಿತು ಭಾಷಣ ಮಾಡುವ ಬದಲು, ಜನತೆಗೆ ಪರಿಹಾರ ನೀಡಲಿ : ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ
Prasthutha: April 22, 2021

ಹೊಸದಿಲ್ಲಿ : ದೇಶದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೊರೋನಾ ಪರಿಸ್ಥಿತಿ ಕುರಿತು ಭಾಷಣಗಳನ್ನು ಮಾಡುವ ಬದಲು ಜನತೆಗೆ ಬೇಕಾದ ಪರಿಹಾರವನ್ನು ನೀಡಲಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ನಾನು ಹೋಂ ಕ್ವಾರಂಟೈನ್ ನಲ್ಲಿದ್ದೇನೆ. ಬೇಸರ ತರಿಸುವ ಸುದ್ದಿಗಳು ಬರುತ್ತಲೇ ಇವೆ. ಭಾರತದಲ್ಲಿ ಕೊರೋನಾ ಸಮಸ್ಯೆ ಮಾತ್ರವಲ್ಲ ಬದಲಾಗಿ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳೂ ತಾಂಡವವಾಡುತ್ತಿದೆ. ಕೇಂದ್ರ ಸರ್ಕಾರ ಟೊಳ್ಳು ಭಾಷಣ ಮಾಡುವ ಬದಲು ಜನರಿಗೆ ಪರಿಹಾರವನ್ನು ನೀಡಲಿ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ರಾಹುಲ್ ಗಾಂಧಿಯವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಪ್ರಸ್ತುತ ಹೋಂ ಕ್ವಾರಂಟೈನ್ ನಲ್ಲಿದ್ದಾರೆ.
