ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಶೇಕಡಾ 0.50ಯಷ್ಟು ಹೆಚ್ಚಿಸಿದ್ದು, ಇದರಿಂದ ರೆಪೋ ದರ ಶೇ.5.40ಕ್ಕೆ ಏರಿಕೆಯಾಗಿದೆ.
ಸಾಲದ ದರವನ್ನು ಶುಕ್ರವಾರ 50 ಬೇಸಿಸ್ ಪಾಯಿಂಟ್ (ಬಿಪಿಎಸ್) ನಿಂದ 5.40 ಪ್ರತಿಶತಕ್ಕೆ ಹೆಚ್ಚಿಸಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಘೋಷಿಸಿದ್ದಾರೆ.
ಇದು ಈ ಹಣಕಾಸು ವರ್ಷದಲ್ಲಿ ಕೇಂದ್ರೀಯ ಬ್ಯಾಂಕ್ ನಿಂದ ಇದು ಮೂರನೇ ದರ ಏರಿಕೆಯಾಗಿದೆ. ಇದಕ್ಕೂ ಮೊದಲು, ಆರ್ ಬಿಐ ರೆಪೊ ದರವನ್ನು ಮೇ ತಿಂಗಳಲ್ಲಿ 40 ಬಿಪಿಎಸ್ ಮತ್ತು ಜೂನ್ ನಲ್ಲಿ 50 ಬಿಪಿಎಸ್ ಹೆಚ್ಚಿಸಿತ್ತು. ಈ ಸಭೆಯಲ್ಲಿ ಎಂಪಿಸಿ ಕನಿಷ್ಠ 35 ಬಿಪಿಎಸ್ ರೆಪೊ ದರವನ್ನು ಹೆಚ್ಚಿಸಲಿದೆ ಎಂದು ಮಾರುಕಟ್ಟೆ ತಜ್ಞರು ನಿರೀಕ್ಷಿಸಿದ್ದಾರೆ.
ಈ ಹೆಚ್ಚಳದೊಂದಿಗೆ ರೆಪೊ ದರವೀಗ ಕೋವಿಡ್–19 ಸಾಂಕ್ರಾಮಿಕಕ್ಕಿಂತ ಮೊದಲಿನ ಹಂತಕ್ಕೆ ತಲುಪಿದೆ. 2019ರ ಆಗಸ್ಟ್ ನಲ್ಲಿ ರೆಪೊ ದರ ಇದೇ ಮಟ್ಟದಲ್ಲಿತ್ತು.