ಫೇಸ್ಬುಕ್ ಇಂಡಿಯಾದ ನೌಕರರು ಮೋದಿಯನ್ನು ಗುರಿಪಡಿಸುತ್ತಿದ್ದಾರೆ | ಫೇಸ್ಬುಕ್ ಜೊತೆಗಿನ ಪಕ್ಷದ ಅನೈತಿಕ ನಂಟನ್ನು ಮರೆಮಾಚಲು ಐಟಿ ಸಚಿವ ರವಿಶಂಕರ್ ಪ್ರಸಾದ್ ಕಸರತ್ತು

Prasthutha|


ನವದೆಹಲಿ : ಆಂತರಿಕ ವಿಭಜನೆ ಮತ್ತು ಸಾಮಾಜಿಕ ಅಸ್ಥಿರತೆ ಸೃಷ್ಟಿಸಲು ಸ್ಥಾಪಿತ ಹಿತಾಸಕ್ತಿಗಳು ಫೇಸ್ ಬುಕ್ ಅನ್ನು ಹೊಸ ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ ಎಂದು ಕೇಂದ್ರ ಐಟಿ ಮತ್ತು ಟೆಲಿಕಾಂ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ. ಅಲ್ಲದೆ, ಫೇಸ್ ಬುಕ್ ನೌಕರರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವರನ್ನು ನಿಂದಿಸುವುದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂದೂ ಅವರು ಆಪಾದಿಸಿದ್ದಾರೆ. ಈ ಕುರಿತು ಫೇಸ್ ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ಗೆ ಪತ್ರ ಬರೆದಿರುವ ಅವರು, ಭಾರತಕ್ಕೆ ಹೊಸ ನಿರ್ದಿಷ್ಟ ಸಮುದಾಯ ಮಾರ್ಗಸೂಚಿಗಳನ್ನು ರಚಿಸುವಂತೆ ಅವರು ಒತ್ತಾಯಿಸಿದ್ದಾರೆ.

- Advertisement -

ಫೇಸ್ ಬುಕ್ ತಟಸ್ಥವಾಗಿರುವಂತೆ ಇರುವುದು ಮಾತ್ರವಲ್ಲ, ವಾಸ್ತವವಾಗಿಯೂ ಅದೇ ರೀತಿ ಇರಬೇಕು ಎಂದು ಅವರು ಹೇಳಿದ್ದಾರೆ. ಫೇಸ್ ಬುಕ್ ಭಾರತದ ಆಡಳಿತಾರೂಢ ಬಿಜೆಪಿಯೊಂದಿಗೆ ಅನೈತಿಕ ನಂಟು ಹೊಂದಿರುವ ಕುರಿತಂತೆ ಸರಣಿ ವರದಿಗಳು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಮುಜುಗರಗೊಂಡು ರವಿಶಂಕರ್ ಈ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಈಗ ಮುನ್ನೆಲೆಗೆ ಬಂದಿರುವ ಅನಾಮಧೇಯ ಮೂಲಗಳನ್ನು ಆಧರಿಸಿದ ವರದಿಗಳು ನಿಮ್ಮ ಸಂಸ್ಥೆಯೊಳಗೆ ಸೈದ್ದಾಂತಿಕ ಪ್ರಾಬಲ್ಯ ಸಾಧಿಸಲು, ನಡೆಯುತ್ತಿರುವ ಅಧಿಕಾರಕ್ಕಾಗಿನ ಹೋರಾಟವಾಗಿದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಲಪಂಥೀಯ ಮತ್ತು ಕೇಂದ್ರದ ವಿಚಾರಧಾರೆಯನ್ನು ಬೆಂಬಲಿಸುವವರ ಪರವಾಗಿ ಫೇಸ್ ಬುಕ್ ಇಂಡಿಯಾ ಆಡಳಿತ ಕಾರ್ಯ ನಿರ್ವಹಿಸಿದೆ ಎಂಬ ವರದಿಯನ್ನು ನನ್ನ ಗಮನಕ್ಕೆ ತರಲಾಗಿದೆ. ಪಕ್ಷಪಾತ ಮತ್ತು ನಿಷ್ಕ್ರಿಯತೆ ಎಂಬ ಕಪೋಲಕಲ್ಪಿತ ಪ್ರಕರಣವು ನಿಮ್ಮ ಫೇಸ್ ಬುಕ್ ಇಂಡಿಯಾದ ತಂಡದಲ್ಲಿರುವ ಪ್ರಬಲ ರಾಜಕೀಯ ನಂಬಿಕೆಗಳ ನೇರ ಫಲಿತಾಂಶ ಎಂದು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

Join Whatsapp