ಕತಾರ್ ಮಧ್ಯಸ್ಥಿಕೆ | ಉದ್ವಿಗ್ನತೆ ಕಡಿಮೆಗೊಳಿಸಲು ಇಸ್ರೇಲ್-ಹಮಾಸ್ ಒಪ್ಪಂದ

Prasthutha: September 2, 2020

ಗಾಝಾ: ಉದ್ವಿಗ್ನತೆಯನ್ನು ತಗ್ಗಿಸಲು ಇಸ್ರೇಲ್ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಹಮಾಸ್ ಹೇಳಿದೆ. ಕತಾರ್ ನ ಮಧ್ಯಸ್ಥಿಕೆಯಲ್ಲಿ ನಡೆಸಿದ ಮಾತುಕತೆಯಲ್ಲಿ ಹಿಂಸಾಚಾರದಿಂದ ದೂರವಿರಲು ಎರಡೂ ವಿಭಾಗ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹಮಾಸ್ ನಾಯಕತ್ವ ತಿಳಿಸಿದೆ. ಆದರೆ ಹಿಂಸಾ ಪ್ರಿಯ ಇಸ್ರೇಲ್ ಮಾತ್ರ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆಗಸ್ಟ್ 6ರಿಂದ ಇಸ್ರೇಲ್ ಪಡೆಗಳು ಪ್ರತೀದಿನ ಗಾಝಾ ಪ್ರದೇಶದ ಮೇಲೆ ದಾಳಿ ನಡೆಸುತ್ತಿದೆ. ಉತ್ತರ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ರಾಕೆಟ್, ಬಲೂನ್ ದಾಳಿಗೆ ಪ್ರತಿಕ್ರಿಯೆಯಾಗಿ ಪ್ರತಿದಾಳಿ ನಡೆಸಿದ್ದೇವೆ ಎಂದು ಇಸ್ರೇಲ್ ಹೇಳಿದೆ.

13 ವರ್ಷದ ನಿರ್ಬಂಧವನ್ನು ವಿರೋಧಿಸಿ ಹಮಾಸ್ ಇಸ್ರೇಲ್ ನ ಮೇಲೆ ದಾಳಿ ನಡೆಸುತ್ತಿದೆ. ಗಾಝಾದ ಮೀನುಗಾರರು ಸಮುದ್ರಕ್ಕೆ ಹೋಗುವುದನ್ನು  ಮತ್ತು ಪ್ಯಾಲೆಸ್ತೀನ್ ಗೆ ಸರಕುಗಳನ್ನು ತಲುಪಿಸುವುದನ್ನು ಇಸ್ರೇಲ್ ನಿರ್ಬಂಧಿಸಿತ್ತು. ಹೊಸ ಒಪ್ಪಂದದ ಪ್ರಕಾರ ಇಸ್ರೇಲ್ ವಿರುದ್ಧ ಬಲೂನ್ ಮತ್ತು ರಾಕೆಟ್ ದಾಳಿಯನ್ನು ಕೊನೆಗೊಳಿಸುವುದಾಗಿ ಹಮಾಸ್ ಹೇಳಿದೆ. ಗಾಝಾದ ಮೀನುಗಾರರಿಗೆ ಮೆಡಿಟರೇನಿಯನ್ ಸಮುದ್ರಕ್ಕೆ ಪ್ರವೇಶಿಸಲು ಅನುಮತಿಸಿ, ಅಗತ್ಯ ವಸ್ತುಗಳನ್ನು ಗಡಿಯುದ್ದಕ್ಕೂ ತರಲು ಅನುಮತಿಸಿ,ಗಾಝಾ ವಿದ್ಯುತ್ ಸ್ಥಾವರಕ್ಕೆ ಇಂಧನ ಪೂರೈಕೆಯನ್ನು ಮರುಸ್ಥಾಪಿಸಲು ಇಸ್ರೇಲ್ ಒಪ್ಪಿದೆ ಎಂದು ಹಮಾಸ್ ಹೇಳಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!