ಉತ್ತರಾಖಂಡ: ಅಮೆರಿಕಾ ಮಹಿಳೆಯ ಮೇಲೆ ಅತ್ಯಾಚಾರ

Prasthutha|

ಪ್ರವಾಸ ಆಯೋಜಕರೊಬ್ಬರು ತನ್ನ ನಿವಾಸಕ್ಕೆ ಅಕ್ರಮವಾಗಿ ಪ್ರವೇಶಿಸಿ ತನಗರಿವಿಲ್ಲದಂತೆ ಮಾದಕ ವಸ್ತುಗಳನ್ನು ನೀಡಿ ಹಲವು ಬಾರಿ ಅತ್ಯಾಚಾರವೆಸಗಿರುವುದಾಗಿ ಲಾಕ್ಡೌನ್ ವೇಳೆ ಉತ್ತರಖಾಂಡದ ತೆಹ್ರಿ ಘಡ್ವಾಲ್ ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದ ಅಮೆರಿಕಾ ಮಹಿಳೆಯರೊಬ್ಬರು ಹೇಳಿದ್ದಾರೆ.

ಪೊಲೀಸರು ಈ ಕುರಿತು ಎಫ್.ಐ.ಆರ್ ದಾಖಲಿಸಿದ್ದಾರೆ. ಪ್ರಕರಣದ ಆರೋಪಿ ತಲೆಮರೆಸಿಕೊಂಡಿದ್ದಾನೆ.

- Advertisement -

ಆರೋಪಿಯು ಅಕ್ಟೋಬರ್ 5ರಂದು ಬಲವಂತವಾಗಿ ತನ್ನ ಮನೆಗೆ ಪ್ರವೇಶಿಸಿದ್ದು, ಒಡೆದು ಹೋದ ಗಾಜಿನ ತುಂಡಿನಿಂದ ಹಲ್ಲೆ ನಡೆಸಿದ್ದ. ತನಗೆ ತಿಳಿಯದಂತೆ ಮಾದಕ ದ್ರವ್ಯಗಳನ್ನು  ನೀಡಿ ಹಲವು ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು 37ರ ಹರೆಯದ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

ಬಹುತೇಕ ಎಲ್ಲಾ ದಿನ ಆರೋಪಿ ಬಲವಂತದಿಂದ ತನ್ನ ಮನೆಗೆ ನುಗ್ಗಿ ಬೆದರಿಕೆ ಹಾಕುತ್ತಿದ್ದ ಮತ್ತು ಲೈಂಗಿಕ ದಾಳಿ ನಡೆಸುತ್ತಿದ್ದ ಎಂದು ಆಕೆ ಆರೋಪಿಸಿದ್ದಾಳೆ.

- Advertisement -