‘ನನಗೀಗ ಟೋಪಿ ಧರಿಸಿದ ಕೊರೋನಾ ವೈರಸ್ ಚಿತ್ರ ನೆನಪಾಗುತ್ತಿದೆ’ : ಕೋವಿಡ್ ನಿಯಮ ಪಾಲಿಸದೆ ಹೋಳಿ ಆಚರಿಸಿದ ವೀಡಿಯೋ ಹಾಕಿ ಮಾಧ್ಯಮಗಳ ಕಾಲೆಳೆದ ಪತ್ರಕರ್ತೆ ರಾಣಾ ಅಯ್ಯೂಬ್ !

Prasthutha: April 1, 2021

ಹೊಸದಿಲ್ಲಿ : ಕೊರೋನಾ ವೈರಸ್ ಹರಡುವ ಬಗ್ಗೆ ಮುಸ್ಲಿಮರ ವಿರುದ್ಧ ಸಂಘ ಪರಿವಾರ ಮತ್ತು ಮುಖ್ಯವಾಹಿನಿಯ ಮಾಧ್ಯಮಗಳು ಪ್ರಾರಂಭಿಸಿದ್ದ ದ್ವೇಷ ಅಭಿಯಾನವನ್ನು ಪತ್ರಕರ್ತೆ ರಾಣಾ ಅಯ್ಯೂಬ್ ನೆನಪಿಸಿಕೊಂಡಿದ್ದಾರೆ. ಇಂಡಿಯಾ ಟುಡೆ ಪ್ರಕಟಿಸಿದ್ದ ‘ಮುಸ್ಲಿಂ ಟೋಪಿ ಧರಿಸಿದ ಕರೋನಾ ವೈರಸ್‌’ನ ಚಿತ್ರ ಈಗ ನೆನಪಾಗುತ್ತಿದೆ ಎಂದು ಹೋಳಿ ಆಚರಣೆಯ ವಿಡಿಯೋ ಟ್ವಿಟ್ಟರ್ ನಲ್ಲಿ ಅವರು ಹಂಚಿಕೊಂಡಿದ್ದಾರೆ.

ಕಳೆದ ವರ್ಷದ ಆರಂಭದಲ್ಲಿ ಕೊರೋನಾ ವೈರಸ್ ಹರಡುವ ಬಗ್ಗೆ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ವ್ಯಾಪಕ ಅಭಿಯಾನ ನಡೆದಿತ್ತು. ತಬ್ಲೀಗಿ ಜಮಾಅತ್ ಸಭೆ ನಡೆಸಿರುವುದು ಭಾರತದಲ್ಲಿ ಕೊರೋನಾ ಹರಡಲು ಮುಖ್ಯ ಕಾರಣ ಎಂದು ಸಂಘಪರಿವಾರವನ್ನು ಬೆಂಬಲಿಸಿ ಮಾಧ್ಯಮಗಳು ವರದಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಇಂಡಿಯಾ ಟುಡೆ ಪ್ರಕಟಿಸಿದ್ದ ‘ಮುಸ್ಲಿಂ ಟೋಪಿ ಧರಿಸಿದ ಕರೋನಾ ವೈರಸ್‌’ನ ಚಿತ್ರ ಈಗ ನೆನಪಾಗುತ್ತಿದೆ ಎಂದು ಹೋಳಿ ಆಚರಣೆಯ ವಿಡಿಯೋ ಹಂಚಿಕೊಂಡು ರಾಣಾ ಅಯ್ಯೂಬ್ ಟ್ವೀಟ್ ಮಾಡಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ ಸರ್ಕಾರ ಮತ್ತು ಮಾಧ್ಯಮಗಳು ತಬ್ಲೀಗಿ ಜಮಾಅತ್ ಅನ್ನು ಬೇಟೆಯಾಡುತ್ತಿತ್ತು ಎಂದು ರಾಣಾ ಅಯ್ಯೂಬ್ ಹೇಳಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!