ರಮೇಶ್ ಜಾರಕಿಹೊಳಿಗೆ ಏನೋ ಸಮಸ್ಯೆಯಿದೆ : ತನ್ನ ಮೇಲಿನ ಆರೋಪದ ಬಗ್ಗೆ ಡಿಕೆಶಿವಕುಮಾರ್ ಪ್ರತಿಕ್ರಿಯೆ

Prasthutha: March 27, 2021

► ಸಿಡಿ ಪ್ರಕರಣದ “ಮಹಾನಾಯಕ ಡಿಕೆಶಿ” ಜಾರಕಿಹೊಳಿ ಹೇಳಿಕೆಗೆ ತಿರುಗೇಟು

ಬೆಂಗಳೂರು: ಸೆಕ್ಸ್ ಸಿಡಿ ಪ್ರಕರಣದ ಹಿಂದಿರುವ ಮಹಾನಾಯಕ ಡಿಕೆ ಶಿವಕುಮಾರ್ ಎಂದು ಸಿಡಿ ಪ್ರಕರಣ ಆರೋಪ ಎದುರಿಸುತ್ತಿರುವ ರಮೇಶ್ ಜಾರಕಿಹೊಳಿ ಇಂದು ಸಂಜೆ ತನ್ನ ಸದಾಶಿವನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ.‌ ಜಾರಕಿಹೊಳಿಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಜಾರಕಿಹೊಳಿಗೆ ಏನೋ ಸಮಸ್ಯೆ ಇರಬೇಕು ಎಂದು ಟಾಂಗ್ ನೀಡಿದ್ದಾರೆ.‌

ರಮೇಶ್ ಜಾರಕಿಹೊಳಿ ಇಂದು ಸಂಜೆ ‘ಬಾಂಬ್ ಸಿಡಿಸುತ್ತೇನೆ’ ಎಂದು ನಿನ್ನೆ ಸುದ್ದಿಗಾರರೊಂದಿಗೆ ಹೇಳಿಕೊಂಡಿದ್ದರಲ್ಲದೆ, ಡಿಕೆಶಿ ನಾಳೆ ರಾಜೀನಾಮೆ ನೀಡಬೇಕಾಗಬಹುದು ಎಂದೂ ಹೇಳಿಕೊಂಡಿದ್ದರು.‌ಆದರೆ ಇವತ್ತು ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಮಹಾನಾಯಕ ಡಿಕೆ ಶಿವಕುಮಾರ್ ಮತ್ತು ನನ್ನಲ್ಲಿ 11 ಸಾಕ್ಷ್ಯಾಧಾರಗಳಿವೆ ಎಂದು ಹೇಳಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಸಂಬಂಧ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಡಿಕೆಶಿ ಮಾತನಾಡುತ್ತಾ, ಅವರು ಏನೆಲ್ಲಾ ಮಾತನಾಡುತ್ತಾರೆ.‌ ಮಾತನಾಡಿದ್ದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಮತ್ತು ಉತ್ತರ ಕೊಡಲೂ ಆಗಲ್ಲ. ಕಾನೂನು ಇದೆ. ಅಧಿಕಾರಿಗಳಿದ್ದಾರೆ.‌ ತನಿಖೆ ನಡೆಸಿ ಅವರೆಲ್ಲನೂ ಮಾಡುತ್ತಾರೆ. ನನಗೂ ಈ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದು ಅವರ ವೈಯಕ್ತಿಕ ವಿಚಾರ.‌ ಅವರ ವೈಯಕ್ತಿಕ ಸಮಸ್ಯೆಗಳನ್ನು ಅವರೇ ಸರಿ ಮಾಡಿಕೊಳ್ಳಬೇಕು. ನಿನ್ನೆ ಒಂದು ಮಾತನಾಡುತ್ತಾರೆ. ಇವತ್ತು ಒಂದು ಮಾತನಾಡುತ್ತಾರೆ. ನಾಳೆ ಒಂಥರಾ ಮಾತನಾಡುತ್ತಾರೆ. ನಾನು ಇದಕ್ಕೆಲ್ಲಾ ಪ್ರತಿಕ್ರಿಯಿಸುತ್ತಾ ಕೂತುಕೊಳ್ಳುವುದಕ್ಕೆ ತಯಾರಿಲ್ಲ ಮತ್ತು ನನಗದರ ಅವಶ್ಯಕತೆಯೂ ಇಲ್ಲ. ನಾನು ನನ್ನ ಕೆಲಸ ಮಾಡಿಕೊಂಡಿರುತ್ತೇನೆ.‌ ಅವರದೇ ಬಿಜೆಪಿ ಸರಕಾರವಿದೆ. ಕಾನೂನು ಕೂಡ ಇದೆ.‌ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಿ ಎಂದು ಡಿಕೆಶಿ ಹೇಳಿದ್ದಾರೆ. ‌

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!