ನನ್ನೊಂದಿಗೆ 11 ಸಾಕ್ಷಿಗಳಿವೆ : ಮಹಾನಾಯಕ ಡಿಕೆಶಿಯೆಂದು ಈಗಾ ಸಾಬೀತಾಗಿದೆ : ರಮೇಶ್ ಜಾರಕಿಹೊಳಿ
Prasthutha: March 27, 2021

ಇಂದು ಬಾಂಬ್ ಸಿಡಿಸುತ್ತೇನೆ ಎಂದಿದ್ದ ಸಿಡಿ ಪ್ರಕರಣದ ರೂವಾರಿ ರಮೇಶ್ ಜಾರಕಿಹೊಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನನ್ನೊಂದಿಗೆ 11 ಸಾಕ್ಷಿಗಳಿವೆ. ಇವತ್ತು ಮಹಾನಾಯಕ ಯಾರೆಂದು ಬಹಿರಂಗವಾಗಿದೆ. ನಾನು ಅಪರಾಧಿಯಾಗಿದ್ದರೆ ನನ್ನನ್ನು ಬಂಧಿಸಲಿ. ಯುವತಿಯಾಗಿದ್ದರೆ ಯುವತಿ ಅಥವಾ ನರೇಶ್ ಆಗಿದ್ದರೆ ನರೇಶ್ ರನ್ನು ಬಂಧಿಸಲಿ. ಪ್ರಕರಣದ ಹಿಂದಿರುವ ಮಹಾನಾಯಕ ರಾಜಕಾರಣದಲ್ಲಿರಲು ನಾಲಾಯಕ್ಕು. ಇಂತಹ ಷಡ್ಯಂಡ್ರ ಮಾಡಬಾರದು. ನಿನ್ನೆ ಮಾತನಾಡಿದ ಉದ್ದೇಶ ಬೇರೆಯೇ ಇತ್ತು. ಇಷ್ಟು ದೊಡ್ಡ ಷಡ್ಯಂತ್ರವನ್ನು ತಾನೇ ತಾನಾಗಿ ಒಪ್ಪಿಕೊಳ್ಳಬೇಕು. ಕಾಂಗ್ರೆಸ್ ಪಕ್ಷದವರೊಂದಿಗೆ ಕೇಳಿಕೊಳ್ಳುತ್ತಿದ್ದೇನೆ ಅವರ ಬೆಂಬಲಕ್ಕೆ ಯಾರು ನಿಲ್ಲಬೇಡಿ. ಅವರು ಪಕ್ಷದಲ್ಲಿರಲು ಅರ್ಹರಲ್ಲ. ಅ ಮಹಾನಾಯಕ ಗಂಡಸಲ್ಲ ದೊಡ್ಡ ಗಾ***** ನಾನು ಗಂಡಸು. ಇವತ್ತು ಡಿಕೆಶಿ ಗೆ ನಾನು ಚಾಲೆಂಜ್ ಮಾಡ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
