ಮಾಧ್ಯಮಗಳ ಕಣ್ಣು ತಪ್ಪಿಸಿ ಕೊನೆಗೂ ಸಂತ್ರಸ್ತ ಯುವತಿ ಕೋರ್ಟ್ ಹಾಲ್ ನಲ್ಲಿ ಪ್ರತ್ಯಕ್ಷ !

Prasthutha|

ಬೆಂಗಳೂರು : ರಮೇಶ್ ಜಾರಕಿಹೊಳಿಯದ್ದೆಂದು ಹೇಳಲಾದ ಲೈಂಗಿಕ ಸಿಡಿ ಪ್ರಕರಣದಲ್ಲಿ ಇರುವ ಸಂತ್ರಸ್ತ ಯುವತಿಯು ಕೊನೆಗೂ ಬಹಿರಂಗವಾಗಿ ಪ್ರತ್ಯಕ್ಷಳಾಗಿದ್ದಾಳೆ. ಮದ್ಯಾಹ್ನ 3 ಗಂಟೆಗೆ ಆಕೆ ನಿಮ್ಮೆಲ್ಲರ ಮುಂದೆ ಕೋರ್ಟ್ ಹಾಲ್ ಗೆ ಹೋಗಿದ್ದಾಳೆ ಎಂದು ಆಕೆಯ ಪರ ವಕೀಲ ಜಗದೀಶ್ ಗೌಡ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಕೋರ್ಟ್ ಹಾಲ್ ನಲ್ಲಿ ನ್ಯಾಯಾಧೀಶರ ಆದೇಶದ ಪ್ರಕಾರ ಅಲ್ಲಿ ಯುವತಿ, ನ್ಯಾಯಾಧೀಶರು ಮತ್ತು ಟೈಪಿಸ್ಟ್ ಬಿಟ್ಟರೆ ನಾಲ್ಕನೇ ವ್ಯಕ್ತಿಗೆ ಅವಕಾಶವಿಲ್ಲ ಎನ್ನಲಾಗಿದೆ.