ಉಳ್ಳಾಲ ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಎಸ್ಡಿಪಿಐ ತೆಕ್ಕೆಗೆ

Prasthutha|

ಮಂಗಳೂರು : ಉಳ್ಳಾಲ ನಗರ ಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಎಸ್ಡಿಪಿಐ ತನ್ನ ತೆಕ್ಕೆಗೆ ಹಾಕಿಕೊಂಡಿದೆ.  ಝರೀನ ರವೂಫ್ ಅವರು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.  ಉಳ್ಳಾಲ ನಗರ ಸಭೆಯಲ್ಲಿ ಒಟ್ಟು  31 ಸದಸ್ಯ ಸ್ಥಾನದಲ್ಲಿ ಕಾಂಗ್ರೆಸ್ 13, SDPI 6, ಬಿಜೆಪಿ 6 , ಜೆಡಿಎಸ್ 4, ಮತ್ತು ಸ್ವತಂತ್ರರು ಎರಡು ಸ್ಥಾನಗಳಲ್ಲಿ ವಿಜಯಿಯಾಗಿದ್ದರು.

- Advertisement -

ಇಂದು ನಡೆದ ನಗರ ಸಭೆಯ ಸಭೆಯಲ್ಲಿ ಉಳ್ಳಾಲ ಹಳೆಕೋಟೆ 12ನೇ ವಾರ್ಡಿನ ಎಸ್ಡಿಪಿಐನ ಕೌನ್ಸಿಲರ್ ಆಗಿರುವ ಝರೀನ್ ರವೂಫ್ ಅವರು ಸ್ಥಾಯಿ ಸಮಿತಿಯ ಅಧ್ಯಕ್ಷೆಯಾಗಿ ಆಯ್ಕೆಗೊಂಡರು. ಸ್ಥಾಯಿ ಸಮಿತಿಯಲ್ಲಿ 11 ಮಂದಿ ಸದಸ್ಯರುಗಳಿದ್ದಾರೆ. ಅದರಲ್ಲಿ ಕಾಂಗ್ರೆಸ್ಸಿನ ಕೌನ್ಸಿಲರ್ ಗಳಾದ ಭಾರತಿ, ಸಪ್ನಾ ಹರೀಶ್, ಶಶಿಕಲಾ, ವೀಣಾ ಮತ್ತು ಇಬ್ರಾಹೀಮ್ ಅಶ್ರಫ್ ಅವರಿದ್ದರೆ,  ಎಸ್ಡಿಪಿಐ ಪಕ್ಷದ ಕೌನ್ಸಿಲರ್ ಗಳಾದ  ಝರೀನ ರವೂಫ್, ರಮೀಝ್, ಅಝ್ಗರ್ ಅಲಿ ಮತ್ತು ಶಹನಾಝ್ ಅಕ್ರಂ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಜೆಡಿಎಸ್ ನ ಜಬ್ಬಾರ್ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿರುವ ಅಬ್ದುಲ್ ಅಝೀಝ್ ಸ್ಥಾಯಿ ಸಮಿತಿಯಲ್ಲಿ ಸ್ಥಾನ ಪಡೆದಿರುವ ಇತರೆ ಸದಸ್ಯರುಗಳಾಗಿದ್ದಾರೆ.

Join Whatsapp