ಕೋವಿಡ್ | ಮಕ್ಕಾದ ಮಸ್ಜಿದ್-ಉಲ್-ಹರಮ್ ನಲ್ಲಿ ರಂಝಾನ್ ಮಾರ್ಗಸೂಚಿ ಪ್ರಕಟ

Prasthutha|

ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು ಪ್ರಾರ್ಥನೆಗೆ ಹಾಜರಾಗುವುದನ್ನು ಮತ್ತು ಕೋವಿಡ್ ಹರಡುವುದನ್ನು ಗಮನದಲ್ಲಿಟ್ಟುಕೊಂಡು, ಎರಡು ಹರಮ್ ಕಾರ್ಯಾಲಯದ ಮುಖ್ಯಸ್ಥ ಡಾ. ಅಬ್ದುಲ್ ರಹಮಾನ್ ಅಲ್ ಸುದೈಸ್ ವಿಶೇಷ ಯೋಜನೆಯನ್ನು ಘೋಷಿಸಿದ್ದಾರೆ. ಮಕ್ಕಾದಲ್ಲಿನ ಮಸ್ಜಿದುಲ್ ಹರಮ್‌ನ ಪೂರ್ವ ಪ್ರಾಂಗಣ ಸೇರಿದಂತೆ ಐದು ಪ್ರದೇಶಗಳು ಪ್ರಾರ್ಥನೆಗಾಗಿ ತೆರೆದಿರುತ್ತವೆ.

ಇದಲ್ಲದೆ, ಅಂಗವಿಕಲರಿಗೆ ಮತ್ತು ಇತರ ವಿಶೇಷ ಪರಿಗಣನೆ ಅಗತ್ಯವಿರುವವರಿಗೆ ಹೆಚ್ಚುವರಿ ವ್ಯವಸ್ಥೆಗಳನ್ನು ಮಾಡಲಾಗಿದೆ. ಕಿಂಗ್ ಅಬ್ದುಲ್ ಅಝೀಝ್ ಗೇಟ್ ಕೂಡ ರಂಝಾನ್‌ನಲ್ಲಿ ತೆರೆಯಲು ಸಜ್ಜಾಗಿದೆ. ರಂಜಾನ್ ಸಮಯದಲ್ಲಿ ಉಮ್ರಾ ಯಾತ್ರಾರ್ಥಿಗಳಿಗೆ ಮಾತ್ರ ಮತಾಫ್ ಪ್ರವೇಶಿಸಲು ಅವಕಾಶವಿದೆ. ಅಲ್ಲದೆ, ಉಮ್ರಾ ಯಾತ್ರಾರ್ಥಿಗಳು ಮೊದಲ ಮಹಡಿಯಲ್ಲಿ ತವಾಫ್ ಮಾಡಬಹುದು.

- Advertisement -

ಪ್ರತಿದಿನ ಎರಡು ಲಕ್ಷ ಬಾಟಲಿ ಝಂಝಂ ನೀರನ್ನು ವಿತರಿಸಲಾಗುವುದು. ಎರಡು ಹರಾಮ್‌ಗಳಲ್ಲಿ ಉಪವಾಸವನ್ನು ಮುರಿಯಲು ಬರುವವರು ತಮ್ಮ ಸ್ವಂತ ಬಳಕೆಗಾಗಿ ನೀರು ಮತ್ತು ಖರ್ಜೂರವನ್ನು ಮಾತ್ರ ತರಬಹುದು. ಆದರೆ ಇತರರೊಂದಿಗೆ ಹಂಚಿಕೊಳ್ಳಲು ಅಥವಾ ವಿತರಿಸಲು ಅವಕಾಶವಿಲ್ಲ. ಹರಂ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಆಹಾರ ಅಥವಾ ಇತರ ಪಾನೀಯಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಪವಿತ್ರ ಕುರ್‌ಆನ್‌ನ ಒಂದೂವರೆ ಲಕ್ಷ ಪ್ರತಿಗಳನ್ನು ಹರಮ್‌ನಲ್ಲಿ ವಿತರಿಸಲಾಗುವುದು. ಮದೀನಾದ ರೌಳಾ ಶರೀಫಿನಲ್ಲಿ  ತರಾವೀಹ್ ಪ್ರಾರ್ಥನೆಯ ರಕ‌ಅತ್‌ಗಳನ್ನು ಕಡಿಮೆಗೊಳಿಸಿ  ಪ್ರಾರ್ಥನೆ ನಡೆಸಿದ ಅರ್ಧ ಘಂಟೆಯಲ್ಲಿ ಮಸೀದಿಯನ್ನು ಮುಚ್ಚಲಾಗುತ್ತದೆ.

ರಂಝಾನಿನ ಕೊನೆಯ ಹತ್ತು ದಿನಗಳಲ್ಲಿ ಮಸೀದಿಯೊಳಗೆ ಇಅ್‌ತಿಕಾಫ್ ಕುಳಿತುಕೊಳ್ಳುವುದನ್ನು ನಿಷೇಧಿಸಲಾಗಿದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಮಸ್ಜಿದುನ್ನಬವಿ ಕಚೇರಿ ತಿಳಿಸಿದೆ.

- Advertisement -