ಇಟಲಿಯಲ್ಲಿ ಭೂ ಕುಸಿತ; ನವಜಾತ ಶಿಶು ಸೇರಿ 7 ಮಂದಿ ಮೃತ್ಯು

Prasthutha|

ರೋಮ್: ಪರ್ವತದ ಮಣ್ಣು ಕುಸಿದ ಪರಿಣಾಮ ಮೂರು ವಾರದ ನವಜಾತ ಶಿಶು ಸೇರಿ 7 ಮಂದಿ ಮೃತಪಟ್ಟ ಘಟನೆ ಇಟಲಿಯ ಇಸ್ಕಿಯಾ ದ್ವೀಪದ ನೇಪಲ್ಸ್ ನ ಕಸಾಮಿಚ್ ನಗರದಲ್ಲಿ ನಡೆದದೆ.

- Advertisement -

ಭಾರೀ ಮಳೆಯಿಂದಾಗಿ ಪರ್ವತದ ಒಂದು ಭಾಗವು ಸಡಿಲಗೊಂಡು ಕುಸಿದ ರಭಸಕ್ಕೆ ಕಟ್ಟಡಗಳು ಉರುಳಿ, ವಾಹನಗಳು ಸಮುದ್ರಕ್ಕೆಸೆಯಲ್ಪಟ್ಟಿವೆ.

ಅಪಘಾತದ ಸ್ಥಳದಲ್ಲಿ ಸಂಪೂರ್ಣ ಕೆಸರು ಮತ್ತು ನೀರು ತುಂಬಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಎಲ್ಲ ಮೃತದೇಹಗಳನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದ್ದು, ನಾಪತ್ತೆಯಾಗಿರುವ 5 ಮಂದಿಗಾಗಿ  ಶೋಧ ನಡೆಯುತ್ತಿದೆ. ಮತ್ತೆ ಭೂಕುಸಿತದ ಅಪಾಯಗಳಿದ್ದು, ರಕ್ಷಣಾ ತಂಡ ಕಾಲ್ನಡಿಗೆಯಲ್ಲಿ ಶೋಧ ಕಾರ್ಯ ಮುಂದುವರಿಸಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ಲೂಕಾ ಕ್ಯಾರಿ ತಿಳಿಸಿದ್ದಾರೆ.

- Advertisement -

ರಸ್ತೆ ತೆರವು ಮಾಡಿ ರಕ್ಷಣಾ ತಂಡ ಘಟನಾ ಸ್ಥಳಕ್ಕೆ ತೆರಳಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸಣ್ಣ ಬುಲ್ಡೋಜರ್ ಗಳನ್ನು ಬಳಸಲಾಗುತ್ತಿದೆ. ಸಮುದ್ರಕ್ಕೆ ದೂಡಲ್ಪಟ್ಟಿರುವ ಕಾರುಗಳ ಶೋಧಕ್ಕೆ ಮುಳುಗು ತಜ್ಞರನ್ನು ಕರೆಸಲಾಗಿದೆ ಎಂದು ಕ್ಯಾರಿ ತಿಳಿಸಿದ್ದಾರೆ.

Join Whatsapp