ಗಲ್ಫ್ ರಾಷ್ಟ್ರಗಳಲ್ಲಿ ನಾಳೆಯಿಂದ ರಮಝಾನ್ ವೃತಾರಂಭ

Prasthutha|

►ಒಮಾನಿನಲ್ಲಿ ಮಾತ್ರ ಬುಧವಾರದಿಂದ ರಮಝಾನ್

- Advertisement -

ಗಲ್ಫ್ ದೇಶಗಳಲ್ಲಿ ಎಪ್ರಿಲ್ 13 ರಿಂದ ರಮಝಾನಿನ ವೃತ ಅನುಷ್ಟಾನ ಪ್ರಾರಂಭವಾಗಲಿದೆ. ಚಂದ್ರ ದರ್ಶನಕ್ಕಾಗಿ ನಿನ್ನೆ ಸೌದಿಯ ವಿವಿಧ ಕಡೆಗಳಲ್ಲಿ ಖಗೋಳ ವಿಜ್ಞಾನಿಗಳು ಕಾದು ಕುಳಿತಿದ್ದರೂ ಎಲ್ಲಿಯೂ ಚಂದ್ರ ದರ್ಶನದ ಕುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಮಂಗಳವಾರದಿಂದ ರಮಝಾನ್ ತಿಂಗಳ ಚಂದ್ರ ದರ್ಶನವಾಗಲಿದೆ ಎಂದು ಘೋಷಿಸಲಾಗಿದೆ. ಈ ನಡುವೆ ಗಲ್ಫ್ ರಾಷ್ಟ್ರಗಳ ಪೈಕಿ ಒಮಾನಿನಲ್ಲಿ ಮಾತ್ರ ಅಲ್ಲಿನ ಅಧಿಕೃತ ಸಚಿವಾಲಯ ಈ ಕುರಿತು ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಆದುದರಿಂದ ಒಮಾನಿನಲ್ಲಿ ಎಪ್ರಿಲ್ 14 ರಿಂದ ಬಹುಶಃ ರಮಝಾನಿನ ಮೊದಲ ದಿನವೆಂದು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಭಾನುವಾರ ಚಂದ್ರದರ್ಶನವಾಗಿಲ್ಲವೆಂದು ಅಲ್ ಖಾಸಿಮಿ ವಿಶ್ವವಿದ್ಯಾನಿಲಯದ ಖಗೋಳ ವಿಜ್ಞಾನಿಗಳು ಹೇಳಿದ್ದಾರೆ. ಕತಾರ್ ನಲ್ಲಿರುವ ವಕ್ಫ್ ಸಚಿವಾಲಯವೂ ಮಂಗಳವಾರದಿಂದ ರಮಝಾನಿನ ಮೊದಲ ದಿನವೆಂದು ಘೋಷಿಸಿದೆ. ಹೀಗೆ ಸೌದಿ, ಕತಾರ್, ಯುಎಇ, ಬಹ್ರೈನ್ ಮತ್ತು ಕುವೈತ್ ಗಳಲ್ಲಿ ಕೂಡಾ ಎಪ್ರಿಲ್ 13 ರಿಂದ ರಮಝಾನಿನ ಮೊದಲ ವೃತ ಆರಂಭವಾಗಲಿದೆ.



Join Whatsapp