ಸಿಎಂ ಆದಿತ್ಯನಾಥ್ ಕಾಲಿಗೆ ನಮಸ್ಕಾರ: ಸ್ಪಷ್ಟನೆ ನೀಡಿದ ರಜನಿಕಾಂತ್

Prasthutha|

ನವದೆಹಲಿ: ರಜನಿಕಾಂತ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ಕಾಲಿಗೆ ಬಿದ್ದು ನಮಸ್ಕರಿಸಿದ್ದು, ಆಕ್ರೋಶಕ್ಕೆ ಕಾರಣವಾಗಿತ್ತು. ರಜನಿಕಾಂತ್ ವಯಸ್ಸು 72. ಆದಿತ್ಯನಾಥ್ ವಯಸ್ಸು 51. ಇದನ್ನು ಅನೇಕರು ಪ್ರಶ್ನೆ ಮಾಡಿದ್ದರು. ವಯಸ್ಸಿನಲ್ಲಿ ಚಿಕ್ಕವರಾಗಿದ್ದರೆ ಅಂಥವರಿಗೆ ನಮಸ್ಕರಿಸುವ ಪದ್ದತಿ ಇಲ್ಲ. ಆದರೆ, ರಜನಿಕಾಂತ್ ಆ ರೀತಿ ಮಾಡಿದ್ದರು.

- Advertisement -

ಇದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಆಕ್ರೋಶ ಬೆನ್ನಲ್ಲೇ ರಜನಿಕಾಂತ್ ಸ್ಪಷ್ಟನೆ ನೀಡಿದ್ದಾರೆ.

ಸಾಧು-ಸಂತರನ್ನು ಕಂಡರೆ ಕಾಲಿಗೆ ಬೀಳುವುದು ನನ್ನ ಹವ್ಯಾಸ. ಅವರು ನನಗಿಂತ ಕಿರಿಯವರಾದರೂ ನಾನು ಹಾಗೆಯೇ ಮಾಡುತ್ತೇನೆ’ ಎಂದಿದ್ದಾರೆ ರಜನಿಕಾಂತ್. ಯೋಗಿ-ರಜನಿಕಾಂತ್ ಭೇಟಿಗೆ ಕೆಲವರು ರಾಜಕೀಯ ಬಣ್ಣ ಹಚ್ಚಲು ಪ್ರಯತ್ನಿಸಿದ್ದರು. ಈ ಬಗ್ಗೆಯೂ ರಜನಿಕಾಂತ್ ಸ್ಪಷ್ಟನೆ ನೀಡಿದ್ದಾರೆ. ‘ನಾನು ಸಾಕಷ್ಟು ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದೇನೆ. ಅದೊಂದು ಸಹಜ ಭೇಟಿ ಅಷ್ಟೇ. ಅದಕ್ಕಿಂತಲೂ ಹೆಚ್ಚಿನದ್ದೇನು ಇಲ್ಲ’ ಎಂದು ರಜನಿಕಾಂತ್ ಹೇಳಿದ್ದಾರೆ.

Join Whatsapp